ಕಾಬೂಲ್: ಅಫ್ಘಾನ್ ತಾಲಿಬಾನ್ ಉಗ್ರರ ವಶವಾಗುತ್ತಿರುವಂತೆ ಆ ದೇಶದಲ್ಲಿ ಅರಾಜಕತೆ ಪ್ರಾರಂಭವಾಗಿದೆ. ಇನ್ನು ಇಲ್ಲಿ ಮನುಷ್ಯರಂತೆ ಜೀವಿಸಲು ಸಾಧ್ಯವಿಲ್ಲ ಅನ್ನುವುದು ಅಲ್ಲಿನ ನಾಗರಿಕರಿಗೆ ಗೊತ್ತಾಗಿದೆ. ಹೀಗಾಗಿ ಜೀವ ಉಳಿದರೆ ಸಾಕು ಹೇಗೆ ಬದುಕಿಕೊಳ್ಳುತ್ತೇವೆ ಎಂದು ದೇಶದ ಗಡಿ ದಾಟಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ಜೀವ ಉಳಿಸಿಕೊಳ್ಳಲು ಸಾವಿರಾರು ಮಂದಿ ನಾಗರಿಕರು ದೇಶ ತೊರೆಯಲು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಗಿಬಿದ್ದಿದ್ದಾರೆ.
ಬಸ್ಸು ರೈಲುಗಳನ್ನು ಏರಲು ನುಗ್ಗುವಂತೆ ವಿಮಾನಗಳತ್ತ ಜನ ದೌಡಾಯಿಸಿದ್ದಾರೆ. ಇನ್ನು ರನ್ ವೇಯಲ್ಲಿ ವಿಮಾನ ಟೇಕಾಫ್ ಸಲುವಾಗಿ ಹೋಗುತ್ತಿದ್ರೆ ಜನ ಅದರ ಹಿಂದೆ ಓಡಿದ್ದಾರೆ. ಛಾನ್ಸ್ ಸಿಕ್ಕವರು ವಿಮಾನದ ರೆಕ್ಕೆ, ಟಯರ್ ಗಳಲ್ಲಿ ನೇತಾಡಿದ್ದಾರೆ. ಆದರೆ ವಿಮಾನ ಮೇಲೆರಿದ ಬಳಿಕ ಗಾಳಿಯ ರಭಸಕ್ಕೆ ಸಿಕ್ಕ ಅವರು ಕಾಬೂಲ್ ಮಧ್ಯ ಭಾಗಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಇನ್ನೂ ಕೂಡಾ ಕಾಬೂಲ್ ವಿಮಾನ ನಿಲ್ದಾಣಕ್ಕೆ ಸಾಗರೋಪಾದಿಯಲ್ಲಿ ಜನ ಸಮೂಹ ಬರುತ್ತಿದ್ದು, ಹೇಗಾದರೂ ಸರಿ ಜೀವ ಉಳಿಸಿಕೊಂಡರೆ ಸಾಕು ಅನ್ನುವಂತಿದೆ ಪರಿಸ್ಥಿತಿ.
Discussion about this post