ಕಾಬೂಲ್ : ಅಫ್ಘಾನ್ ನ ಎಲ್ಲಾ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿರುವ ತಾಲಿಬಾನ್, ಪಂಜ್ ಶೀರ್ ಅನ್ನು ವಶಪಡಿಸಿಕೊಳ್ಳಲು ಪರದಾಡುತ್ತಿದೆ. ಈ ನಡುವೆ ಪಂಜ್ ಶೀರ್ ಉಳಿಸಿಕೊಳ್ಳಲು ಸ್ಥಳೀಯ ಹೋರಾಟಗಾರರು ಶ್ರಮಿಸುತ್ತಿದ್ದಾರೆ. ಮತ್ತೊಂದು ಕಡೆ ತಾಲಿಬಾನಿಗಳು ಈ ಪ್ರಾಂತ್ಯವನ್ನು ವಶಪಡಿಸಿಕೊಂಡೇ ಸಿದ್ದ ಅಂದಿದ್ದಾರೆ. ಹೀಗಾಗಿ ಎರಡು ಗುಂಪುಗಳ ನಡುವೆ ಯುದ್ಧ ಮುಂದುವರಿದಿದೆ.
ಈ ನಡುವೆ ಈವರೆಗಿನ ಕಾಳಗದಲ್ಲಿ 700ಕ್ಕೂ ಹೆಚ್ಚು ಉಗ್ರರನ್ನು ಕೊಂದಿರುವುದಾಗಿ ಪಂಜ್ ಶೀರ್ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಹೇಳಿಕೊಂಡಿದೆ.ಆದರೆ ತಾಲಿಬಾನಿ ಉಗ್ರರು, ತಾವು ಪಂಜ್ ಶೀರ್ ರಾಜಧಾನಿ ಪ್ರವೇಶಿಸಿದ್ದು, ರಾಜ್ಯಪಾಲರ ಕಚೇರಿ ವಶಪಡಿಸಿಕೊಂಡಿದ್ದೇವೆ ಅಂದಿದ್ದಾರೆ.
ಆದರೆ ಪಂಜ್ ಶೀರ್ ನಲ್ಲಿ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಮುನ್ನಡೆ ಸಾಧಿಸಿದ ಬೆನ್ನಲ್ಲೇ ಪಾಕಿಸ್ತಾನ ತಾಲಿಬಾನಿಗಳ ಬೆಂಬಲಕ್ಕೆ ಧಾವಿಸಿದ್ದು, ತಾಲಿಬಾನಿ ಉಗ್ರರನ್ನು ಏರ್ ಡ್ರಾಪ್ ಮಾಡುವ ಕೆಲಸಕ್ಕೆ ಕೈ ಹಾಕಿದೆ.
Discussion about this post