ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳನ್ನು ತಿದ್ದಲು ಹೋಗಬಾರದು ಎಂದು ಹೇಳುವ ಮೂಲಕ ನಟ ಜಗ್ಗೇಶ್ ಕೂಡ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.
ನಟ ಬುಲೆಟ್ ಪ್ರಕಾಶ್ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಸಹೋದರ, ದಾರಿ ತಪ್ಪಿದ ಮಕ್ಕಳನ್ನು ತಿದ್ದಬಹುದು. ಆದರೆ ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ತಿದ್ದಬಾರದು. ಹೀಗೆ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸವೇ ಯಕ್ಷಪ್ರಶ್ನೆ. ಜನನವು ಹೇಗೋ ಹಾಗೇ ಜೀವನ. ಅಂಥ ಮಕ್ಕಳ ಬಗ್ಗೆ ಅನುಕಂಪ ವಹಿಸಬೇಕು. ಅಂಥವರೆಲ್ಲ ಮಾನಸಿಕ ವಿಕಲಚೇತನರು. ಇಂತಹವರನ್ನು ನೋಡಿ ಕೂಡ ಸಂತೋಷ ಪಡುವ ಜನರು ಇರುವುದು ದೌರ್ಭಾಗ್ಯ’ ಎಂದು ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಕೆ ಮಾಡಿ ತಿರುಚಿದ ಫೋಟೋ ಅಪ್ಲೋಡ್ ಮಾಡಿದ್ದ ನಟಿ ರಮ್ಯಾಗೆ ನಟ ಬುಲೆಟ್ ಪ್ರಕಾಶ್ ತಿರುಗೇಟು ನೀಡಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಪ್ರಕಾಶ್, ‘ಇಡೀ ವಿಶ್ವವೇ ಮೋದಿಗೆ ಸೆಲ್ಯೂಟ್ ಹೊಡೆಯುವಾಗ ರಮ್ಯಾ ಅವರು ಹೀಯಾಳಿಸೋದು ಸರಿಯಲ್ಲ. ಗಣ್ಯವ್ಯಕ್ತಿಗಳ ಬಗ್ಗೆ ಮಾತನಾಡುವಾಗ ಎಚ್ಚರವಹಿಸಬೇಕು. ರಾಜಕೀಯ ತಜ್ಞರ ಬಳಿ ಟ್ಯೂಷನ್ ಗೆ ಹೋಗಿ ಕಲಿತುಕೊಳ್ಳಿ. ಜನರಿಗೆ ತಪ್ಪು ಸಂದೇಶ ರವಾನೆ ಮಾಡ್ಬೇಡಿ ರಮ್ಯಾ ಮೇಡಂ’ ಎಂದು ಹೇಳಿದ್ದರು.
Discussion about this post