ಈ ಬಾರಿ ಪದ್ಮಶ್ರೀ ಪ್ರಶಸ್ತಿ ವಿಜೇತರನ್ನು ನೋಡಿದ್ರೆ ನಿಜಕ್ಕೂ ಖುಷಿಯಾಗುತ್ತದೆ. ಅದರಲ್ಲೂ ಚಿತ್ತ್ ಪುಲಿ ಮಾರಿ ಶಾಲೆ ಕಟ್ಟಿದ ಅಕ್ಷರ ಸಂತ ಹರೇಕಳ ಹಾಜಬ್ಬ. ಲಕ್ಷಾಂತರ ಗಿಡ ನೆಟ್ಟು ಕಾಡು ಬೆಳೆಸಿದ ವೃಕ್ಷ ಮಾತೆ, ಸಸ್ಯ ವಿಜ್ಞಾನಿ ತುಳಸಿ ಗೌಡ ಅವರಿಗೆ ಪ್ರಶಸ್ತಿ ಸಂದಿರುವುದು ಪ್ರಶಸ್ತಿಯ ತೂಕ ಹೆಚ್ಚಿಸುವಂತೆ ಮಾಡಿದೆ.
ಒಂದು ಕಾಲದಲ್ಲಿ ಈ ಪ್ರಶಸ್ತಿಗಳು ಸೆಲೆಬ್ರೆಟಿಗಳಿಗೆ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು ಅನ್ನುವುದನ್ನು ಮರೆಯುವಂತಿಲ್ಲ.
ಕರ್ನಾಟಕದಲ್ಲಿ ಹೇಗೆ ಸಾಧಕರನ್ನು ಹುಡುಕಿಕೊಂಡು ಪದ್ಮ ಪ್ರಶಸ್ತಿ ಬಂದಿದೆಯೋ ಹಾಗೇ ಕೇರಳದಲ್ಲೂ ಸಾಧಕರ ಮನೆ ಬಾಗಿಲಿಗೆ ಪ್ರಶಸ್ತಿ ಹೋಗಿದೆ.
ಅದರಲ್ಲೊಂದು ಹೆಸರು ಎಂ. ಪಂಕಜಾಕ್ಷಿ. ನೂಕ್ ವಿದ್ಯಾ ಪವಕ್ಕಲಿ ಅನ್ನುವ ಕೇರಳದ ಸಾಂಪ್ರದಾಯಿಕ ಗೊಂಬೆಯಾಟವನ್ನು ಜೀವಂತವಾಗಿರಿಸಿರುವ ಹಿರಿಯ ಜೀವವೇ ಎಂ. ಪಂಕಜಾಕ್ಷಿ..
ಅಳಿವಿನಂಚಿನಲ್ಲಿರುವ ಈ ಕಲಾ ಪ್ರಕಾರವನ್ನು ಉಳಿಸುವ ಸಲುವಾಗಿ ಪಂಕಜಾಕ್ಷಿ ಕೆಲಸ ಮಾಡುತ್ತಿದ್ದಾರೆ.
ನೂಕ್ ವಿದ್ಯಾ ಪವಕ್ಕಲಿ ಅಂದ್ರೆ Nokkuvidya Pavakkali (nokku-look, vidya-technique, pavakkali-puppetry) ಅನ್ನುವ ಅರ್ಥವಿದೆ.
ಈ ಗೊಂಬೆಯಾಟ ಪ್ರದರ್ಶನ ಅಂದ್ರೆ ಉಳಿದ ಗೊಂಬೆಯಾಟದಷ್ಟು ಸುಲಭವಿಲ್ಲ. ಸಾಕಷ್ಟು ತರಬೇತಿ, ಧೈರ್ಯ ಇದಕ್ಕೆ ಬೇಕಾಗಿದೆ. ಪಂಕಜಾಕ್ಷಿಯವರು ಪ್ರದರ್ಶಿಸಿರುವ ಗೊಂಬೆಯಾಟ ವಿಡಿಯೋ ಲಿಂಕ್ ಇಲ್ಲಿದೆ. ಇದನ್ನು ನೋಡಿದ ಮೇಲೆ ಇದೆಷ್ಟು ಕಷ್ಟ ಅನ್ನುವುದು ಖಂಡಿತಾ ಅರಿವಾಗುತ್ತದೆ.
ಪಂಕಜಾಕ್ಷಿಯವರು ಅಳಿವನಂಚಿಲ್ಲಿರುವ ಈ ಕಲೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನದಲ್ಲಿರುವ ಸಂದರ್ಭದಲ್ಲೇ ಅವರಿಗೆ ಪದ್ಮ,ಶ್ರೀ ಪ್ರಶಸ್ತಿ ಬಂದಿದೆ.
Discussion about this post