ಮಂಡ್ಯ ಪಾಂಡವಪುರ ತಾಲೂಕಿನ ತಹಸೀಲ್ದಾರ್ ಪ್ರಮೋದ್ ಪಾಟೀಲ್ ಅವರ ಪ್ರೇಮ ವಿವಾಹದ ವಿವಾದವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಸಂಧಾನದ ಮೂಲಕ ಇತ್ಯರ್ಥಪಡಿಸಿದ್ದಾರೆ.
ಪ್ರಮೋದ್ ಪಾಟೀಲ್ ಅವರಿಗೆ ಮನೆಯವರು ಬೇರೆ ಹುಡುಗಿ ಜೊತೆ ಮದುವೆ ನಿಶ್ಚಯಿಸಿದ್ದರು. ಆದರೆ, ತಾನು ಪ್ರೀತಿಸುತ್ತಿದ್ದ ಬೇರೆ ಜಾತಿಯ ಯುವತಿಯನ್ನೇ ಮದುವೆಯಾಗುವುದಾಗಿ ಪ್ರಮೋದ್ ಪಾಟೀಲ್ ಕುಟುಂಬ ಸದಸ್ಯರಿಗೆ ತಿಳಿಸಿದ್ದರು.
ಆಗ ಸುಮ್ಮನಿದ್ದ ಪ್ರಮೋದ್ ಕುಟುಂಬದವರು ದಿಢೀರನೆ ಮಂಗಳವಾರ ಮಂಡ್ಯಕ್ಕೆ ಆಗಮಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ವಿಷಯ ತಿಳಿಸಿದ್ದರು.
ಹೀಗಾಗಿ ಪ್ರಮೋದ್ ಅವರು ತಾನು ಪ್ರೇಮವಿವಾಹವಾಗಿರುವ ವಿಷಯವನ್ನು ಪತ್ನಿಯೊಂದಿಗೆ ಮಂಡ್ಯ ಎಸ್ಪಿ ಕಚೇರಿಗೆ ಆಗಮಿಸಿ ವಿವರಿಸಿದ್ದಾರೆ.
ಹಲವು ವರ್ಷಗಳಿಂದ ಪರಸ್ಪರ ಕಾವು ಪ್ರೀತಿಸುತ್ತಿದ್ದು, ಅಕ್ಟೋಬರ್ ತಿಂಗಳಲ್ಲಿ ದೇವಾಲಯವೊಂದರಲ್ಲಿ ಮದುವೆಯಾಗಿದ್ದೇವೆ. ತನ್ನ ಪತ್ನಿ ಕೂಡ ಗೆಜೆಟೆಡ್ ಅಧಿಕಾರಿಯಾಗಿದ್ದು, ಹೈಕೋರ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
Discussion about this post