ನಟಿ ರಶ್ಮಿಕಾ ನಿವಾಸದ ಮೇಲೆ ಗುರುವಾರ ದಾಳಿ ನಡೆಸಿರುವ ಅಧಿಕಾರಿಗಳು ಶುಕ್ರವಾರವೂ ಶೋಧ ಕಾರ್ಯ ಮುಂದುವರಿಸಿದ್ದಾರೆ. ರಶ್ಮಿಕಾ ತಂದೆಗೆ ಸೇರಿದೆ ಎನ್ನಲಾದ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆಯಲು ಇನ್ನೂ ಬಾಕಿ ಇದ್ದು ಹೀಗಾಗಿ ಶುಕ್ರವಾರವೂ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಈ ನಡುವೆ ಗುರುವಾರ ತಡ ರಾತ್ರಿ ತನಕ ರಶ್ಮಿಕಾ ಅವರನ್ನು ವಿಚಾರಣೆಗೆ ಒಳಪಡಿಸಿರುವ ಐಟಿ ಅಧಿಕಾರಿಗಳು ಇಂದು ರಶ್ಮಿಕಾ ತಾಯಿಯವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.
ಇನ್ನು ವಿಚಾರಣೆ ಎದುರಿಸಿದ ಬಳಿಕ ಬೆಂಗಳೂರಿನತ್ತ ರಶ್ಮಿಕಾ ಪ್ರಯಾಣ ಬೆಳೆಸಿದ್ದಾರೆ. ಈವರೆಗಿನ ಸಿನಿಮಾ ಒಪ್ಪಂದದ ದಾಖಲೆಗಳು, ಸಿನಿ ಪ್ರಾಜೆಕ್ಟ್ ನಿಂದ ಪಡೆದ ಹಣದ ದಾಖಲೆಗಳನ್ನು ಐಟಿ ಅಧಿಕಾರಿಗಳು ಬಯಸಿದ್ದ ಹಿನ್ನಲೆಯಲ್ಲಿ ರಶ್ಮಿಕಾ ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನಲಾಗಿದೆ.
Discussion about this post