ದೇಶದಲ್ಲಿ ಆ್ಯಸಿಡ್ ದಾಳಿ ಪ್ರಕರಣಗಳು ವಿಪರೀತವಾಗಿ ಹೆಚ್ಚಿದ ಹಿನ್ನಲೆಯಲ್ಲಿ ಸರ್ಕಾರ ಆ್ಯಸಿಡ್ ಮಾರಾಟ ಕುರಿತಂತೆ ಅನೇಕ ಕಠಿಣ ನಿಯಮಗಳನ್ನು ರೂಪಿಸಿದೆ.
ಆದರೆ ಇದೀಗ ಅವೆಲ್ಲಾ ಕೇವಲ ಪುಸ್ತಕದಲ್ಲಿ ಮಾತ್ರ ಅನ್ನುವುದು ಬಯಲಾಗಿದೆ.
ಆ್ಯಸಿಡ್ ಸಂತ್ರಸ್ಥೆಯೊಬ್ಬಳ ಕುರಿತಂತೆ ಛಪಾಕ್ ಚಿತ್ರದಲ್ಲಿ ನಟಿಸುವ ದೀಪಿಕಾ ಪಡುಕೋಣೆ ತನ್ನ ತಂಡದೊಂದಿಗೆ ಈ ಸಂಬಂಧ ರಿಯಾಲಿಟಿ ಚೆಕ್ ನಡೆಸಿದ್ದಾರೆ.
ದೀಪಿಕಾ ಪಡುಕೋಣೆ ಶೇರ್ ಮಾಡಿರುವ 5 ನಿಮಿಷ 27 ಸೆಕೆಂಡ್ ಗಳ ವಿಡಿಯೋದಲ್ಲಿ ಚಿತ್ರತಂಡದವರು ಹಿಡನ್ ಕ್ಯಾಮರಾ ಇಟ್ಟುಕೊಂಡು ನಗರದ ಸುತ್ತಮುತ್ತ ಅಂಗಡಿಗಳಿಗೆ ಹೋಗಿ ಆ್ಯಸಿಡ್ ಖರೀದಿಸಿದ್ದಾರೆ.
ದೀಪಿಕಾ ಅವರೇ ಈ ಸಮಯದಲ್ಲಿ ಇಡೀ ಘಟನೆಗಳನ್ನು ತಮ್ಮ ಕಾರಿನಲ್ಲಿ ಕುಳಿತುಕೊಂಡು ನಿಗಾ ವಹಿಸಿದ್ದು ಜನರು ಎಷ್ಟು ಸುಲಭವಾಗಿ ಅಂಗಡಿಗಳಿಗೆ ಹೋಗಿ ಆ್ಯಸಿಡ್ ಖರೀದಿಸುತ್ತಾರೆ ಎಂದು ತೋರಿಸಿದ್ದಾರೆ.ಈ ಸಮಯದಲ್ಲಿ ಒಬ್ಬರೇ ಒಬ್ಬ ಅಂಗಡಿ ಮಾಲಿಕ ಆ್ಯಸಿಡ್ ಕೇಳಿಕೊಂಡು ಬಂದವರಲ್ಲಿ ಐಡಿ ಕಾರ್ಡು ತೋರಿಸಿ ಇಲ್ಲದಿದ್ದರೆ ಆ್ಯಸಿಡ್ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಒಂದೇ ದಿನದಲ್ಲಿ 24 ಬಾಟಲ್ ಆ್ಯಸಿಡ್ ಮಾರಾಟವಾಗಿದ್ದು ಕಂಡೆನು ಎಂದು ದೀಪಿಕಾ ಹೇಳಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ಅವರ ತಂಡದ ಪ್ರಯತ್ನಕ್ಕೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Discussion about this post