ಮೈಸೂರಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ನವೆಂಬರ್ 17 ರಂದು ದುಷ್ಕರ್ಮಿಯೊಬ್ಬ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಮೈಸೂರಿನಲ್ಲಿ ಚಿಕಿತ್ಸೆ ಪಡೆದ ಅವರು ಬಳಿಕ ವಿದೇಶದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇತ್ತೀಚಿಗಷ್ಟೆ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ವಿದೇಶದಿಂದ ಮೈಸೂರಿಗೆ ಸೇಠ್ ಆಗಮಿಸಿದ್ದರು.
ಮೈಸೂರಿಗೆ ಆಗಮಿಸಿದ ಕೆಲ ದಿನಗಳ ಬಳಿಕ ಶ್ರೀರಾಮುಲು ಅವರಿಗೆ ಪತ್ರ ಬರೆದಿರುವ ತನ್ವೀರ್ ಶೇಠ್, ‘ಮಾನ್ಯ ಶ್ರೀರಾಮುಲು ಅವರೇ, ಸಾವಿರಾರು ಜನರ ಪ್ರೀತಿ, ಪ್ರಾರ್ಥನೆಗಳಿಂದ ನನಗೆ ಪುನರ್ಜನ್ಮ ಸಿಕ್ಕಿದೆ. ತಾವು ನನ್ನ ಆರೋಗ್ಯ ವಿಚಾರಿಸಲು ಆಸ್ಪತ್ರಗೆ ಬಂದಿದ್ದು, ದೂರವಾಣಿ ಕರೆ ಮಾಡಿ ನನ್ನಲ್ಲಿ ಹಾಗೂ ನನ್ನ ಕುಟುಂಬದವರಲ್ಲಿ ಆತ್ಮಸ್ಥೈರ್ಯ ತುಂಬಿದ್ದಕ್ಕೆ ನಾನು ವೈಯಕ್ತಿಕವಾಗಿ ಹಾಗೂ ನನ್ನ ಕುಟುಂಬದವರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ವೈದ್ಯರ ಸಲಹೆಯಂತೆ ಇನ್ನೂ 5 ರಿಂದ 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಬೇಕಾಗಿದೆ. ತಮ್ಮ ವಿಶ್ವಾಸ ಹಾಗೂ ಆಶೀರ್ವಾದ ಸದಾ ನನ್ನ ಮತ್ತು ನನ್ನ ಕುಟುಂಬವದರ ಮೇಲಿರಲೆಂದು ಕೋರುತ್ತೇವೆ’ ಅಂದಿದ್ದಾರೆ.
Discussion about this post