ಹೊತ್ತಲ್ಲದ ಹೊತ್ತಿನಲ್ಲಿ ಅವರು ನನ್ನ ಮನೆಗೆ ಬಂದು ಹೋಗುತ್ತಿದ್ದರು. ಹೀಗಿರುವಾಗ ಅವರ ಕೊಠಡಿಗೆ ಹೋಗುವುದಕ್ಕೆ ನನಗೇಕೆ ನಿರ್ಬಂಧ. ಇದು 2105ರ ಅಕ್ಟೋಬರ್ 29 ರಂದು ಪ್ರಜಾವಾಣಿ ಪ್ರಕಟಿಸಿದ ಸುದ್ದಿ.
ಅವತ್ತು ಹೀಗೆ ಹೇಳಿದವರು ಬೇರೆ ಯಾರೂ ಅಲ್ಲ, ಇಂದು ಸಂಜನಾ ವಿರುದ್ಧ ಸಿಡಿದೆದ್ದಿರುವ ವಂದನಾ ಜೈನ್. ಈ ಹೇಳಿಕೆಗೆ ಕಾರಣ 2015ರ ಅಕ್ಟೋಬರ್ ತಿಂಗಳಲ್ಲಿ ಕ್ರಿಕೆಟಿಗ ಅಮಿತ್ ಮಿಶ್ರಾ ಅವರ ಬಂಧನದ ಬಳಿಕದ ಬೆಳವಣಿಗೆ
ಮಿಶ್ರಾ ಕ್ರಿಕೆಟ್ ತರಬೇತಿ ಶಿಬಿರಕ್ಕೆಂದು 2015ರ ಸೆಪ್ಟಂಬರ್ ನಲ್ಲಿ ಬೆಂಗಳೂರಿಗೆ ಬಂದಿದ್ದರು. ರಿಚ್ಮಂಡ್ ರಸ್ತೆಯ ರಿಟ್ಜ್ ಕಾರ್ಲ್ ಟನ್ ಹೋಟೆಲ್ ನಲ್ಲಿ ತಂಗಿದ್ದರು. ಸೆಂ.25 ರಂದು ವಂದನಾ ಜೈನ್ ಅವರು ಮಿಶ್ರಾ ಅವರನ್ನು ಭೇಟಿ ಮಾಡಲು ಹೋಟೆಲ್ ಗೆ ತೆರಳಿದ್ದ ವೇಳೆ ಇಬ್ಬರ ನಡುವೆ ಜಗಳ ಉಂಟಾಗಿತ್ತು ಅನ್ನುವುದು ದೂರಿನ ಸಾರಾಂಶವಾಗಿತ್ತು.
ವಂದನಾ ಜೈನ್ ಸೆ.27 ರಂದು ಅಶೋಕನಗರ ಠಾಣೆಗೆ ದೂರು ನೀಡಿ ಮಿಶ್ರಾ ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು.
ಇದಾದ ಬಳಿಕ ದೂರು ಸ್ವೀಕರಿಸಿದ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದರು.ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಮಿಶ್ರಾ ಬಂದಿರಲಿಲ್ಲ. ಹೀಗಾಗಿ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿಗೆ ಬಂದಿದ್ದ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿ ಅಂದೇ ಜಾಮೀನು ಮೇಲೆ ಬಿಡುಗಡೆಯನ್ನೂ ಮಾಡಿದ್ದರು. ನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
ಆ ಘಟನೆ ನಂತ್ರ ಅಮಿತ್ ಮಿಶ್ರಾ ಕ್ರಿಕೆಟ್ ಜೀವನ ಸಾಕಷ್ಟು ಕುಸಿತ ಕಂಡಿತ್ತು. ಮತ್ತೆ ಅವರು ಕ್ರಿಕೆಟ್ ಅಂಗಳದಲ್ಲಿ ಚೇತರಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ.
ಈ ನಡುವೆ 2019ರ ಫೆಬ್ರವರಿ ತಿಂಗಳಲ್ಲಿ ಹೈಕೋರ್ಟ್ ಮೆಟ್ಟಿಲೇರಿದ ಮಿಶ್ರಾ ಪ್ರಕರಣವನ್ನು ಕೈ ಬಿಡುವಂತೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ನಗರದ 11 ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಇದೀಗ ಪ್ರಕರಣ ಏನಾಗಿದೆ ಅನ್ನುವ ಮಾಹಿತಿ ಲಭ್ಯವಾಗಿಲ್ಲ.
ಹಾಗಾದ್ರೆ ಮಿಶ್ರಾ ಮತ್ತು ಜೈನ್ ನಡುವೆ ಇದ್ದ ಸಂಬಂಧ ಎಂತಹುದು. ಅವತ್ತು ಕೊಟ್ಟಿರುವ ದೂರಿನ ಅಂಶಗಳನ್ನು ಗಮನಿಸಿದರೆ ಅವರಿಬ್ಬರ ನಡುವೆ ಕೆಲ ವರ್ಷಗಳ ಸಂಬಂಧ ಇತ್ತು ಅನ್ನುವುದು ಗೊತ್ತಾಗುತ್ತದೆ. ಇನ್ನು ಪ್ರಜಾವಾಣಿಗೆ ಕೊಟ್ಟಿರುವ ಹೇಳಿಕೆ ಗಮನಿಸಿದರೆ ಎಂಥಾ ದಡ್ಡರೂ ಕೂಡಾ ಆ ಸಂಬಂಧವನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.
ಇನ್ನು ಈ ಕುರಿತಂತೆ ಆಂಗ್ಲ ವೆಬ್ ಸೈಟ್ ವಿಸ್ಕೃತ ವರದಿಯೊಂದನ್ನು ಆಗ ಪ್ರಕಟಿಸಿತ್ತು.
ಅಲ್ಲಿಗೆ ವಂದನಾ ಜೈನ್ ಮತ್ತು ಅಮಿತ್ ಮಿಶ್ರಾ ಕುರಿತಂತೆ ಸಂಜನಾ ಹೇಳಿರುವುದರಲ್ಲಿ ತಪ್ಪೇನಿದೆ. ಸಂಜನಾ ಗೂಗಲ್ ನಲ್ಲಿ ಲಭ್ಯವಿರುವ ಮಾಹಿತಿಯನ್ನು ಓದಿ ಆರೋಪಿಸಿದ್ದಾರೆ. ಈ ವರದಿ ಕೂಡಾ ಗೂಗಲ್ ಕೊಟ್ಟ ಮಾಹಿತಿಯನ್ನು ಆಧರಿಸಿದೆ. ಹಾಗಿದ್ದ ಮೇಲೆ ಗೂಗಲ್ ಮೇಲೂ ಮಾನನಷ್ಟ ಕೇಸು ದಾಖಲಿಸಬೇಕಲ್ವ…
Discussion about this post