ಕಪಾಲ ಬೆಟ್ಟದಲ್ಲಿ ಡಿಕೆ ಶಿವಕುಮಾರ್ ಸ್ಥಾಪಿಸಲು ಹೊರಟಿರುವ ಏಸು ಕ್ರಿಸ್ತನ ಪ್ರತಿಮೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಈಗಾಗಲೇ ಪ್ರತಿಮೆ ಸ್ಥಾಪನೆ ನಿಲ್ಲಿಸುವಂತೆ ಸೂಚಿಸಲಾಗಿದೆ. ಈ ನಡುವೆ ಈ ವಿವಾದವನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.
ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಪಾಲ ಬೆಟ್ಟವನ್ನು ಏಸು ಬೆಟ್ಟ ಮಾಡಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ ಎಂದು ದೂರಿದ್ದಾರೆ.
ಮಠದಲ್ಲಿ ವಿಭೂತಿ ಹಾಕಿಕೊಂಡ್ರೆ ಕಾಂಗ್ರೆಸ್ ನಾಯಕರು ಗೇಲಿ ಮಾಡ್ತಾರೆ. ಆದರೆ ಕಾಲ ಭೈರವನ ಬೆಟ್ಟ ಅನ್ನಿಸಿಕೊಂಡಿರುವ ಕಪಾಲ ಬೆಟ್ಟವನ್ನು ಏಸು ಬೆಟ್ಟ ಮಾಡಲು ಹೊರಟ್ರೆ ಯಾರೂ ಮಾತನಾಡುತ್ತಿಲ್ಲ. ಕಪಾಲ ಬೆಟ್ಟವನ್ನು ಏಸು ಬೆಟ್ಟವನ್ನಾಗಿ ಮಾಡಿ ಶಿವಕುಮಾರ್ ಏಸು ಕುಮಾರ್ ಆಗಲು ಯಾಕೆ ಹೊರಟಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ.
ಶಿವನ ಅನುಯಾಯಿಗಳ ಬಗ್ಗೆ ಕಾಲಭೈರವನ ಭಕ್ತರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಅದ್ಯಾಕೆ ದ್ವೇಷವೋ ಗೊತ್ತಿಲ್ಲ. ಕಾಂಗ್ರೆಸ್ ಏನನ್ನು ಸಾಧಿಸಲು ಹೊರಟಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಆದರೆ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ನೋಡಿದ್ರೆ ಕಾಲಭೈರವನ ಭಕ್ತರ ಬಗ್ಗೆ ಅವರಿಗೆ ದ್ವೇಷವಿದೆ ಅನ್ನುವುದು ಗೊತ್ತಾಗುತ್ತಿದೆ ಎಂದಿದ್ದಾರೆ ಪ್ರತಾಪ್ ಸಿಂಹ.
Discussion about this post