ನಟಿ ಸಂಜನಾ ಮತ್ತು ನಿರ್ಮಾಪಕಿ ವಂದನಾ ಇಬ್ಬರು ಕೂಡ ಪಬ್ ಒಂದರಲ್ಲಿ ಕುಡಿದು ಪರಸ್ಪರ ಕಿತ್ತಾಡಿಕೊಂಡಿದ್ದರು. ಒಬ್ಬರ ನಡೆತೆ ಮೇಲೆ ಮತ್ತೊಬ್ಬರು ಆರೋಪವನ್ನು ಮಾಡಿಕೊಂಡಿದ್ದರು.
ಯುಬಿ ಸಿಟಿ ಬಳಿಯ ಪಬ್ ಒಂದರಲ್ಲಿ ಸ್ಯಾಂಡಲ್ವುಡ್ ನಟಿ ಸಂಜನಾ, ನಿರ್ಮಾಪಕಿ ವಂದನಾ ಮೇಲೆ ವಿಸ್ಕಿ ಗ್ಲಾಸ್ ಅನ್ನು ಬಿಸಾಡಿದ್ದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ಸಂಜನಾ ಕೂಡ ವಂದನಾ ಮೇಲೆ ದೂರು ನೀಡಿದ್ದರು
ಇದಾದ ಬಳಿಕ ಇಬ್ಬರೂ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರು. ತಮ್ಮ ಖಾಸಗಿ ವಿಷಯಗಳ ಕುರಿತಂತೆ ಮಾತನಾಡಿಕೊಂಡಿದ್ದರು. ಇವರಿಬ್ಬರ ಪರಸ್ಪರ ಮಾತುಗಳನ್ನು ಕೇಳಿದ ಮೇಲೆ ಜನ ಸೆಲೆಬ್ರೆಟಿಗಳು ಅಂದ್ರೆ ಹೇಸಿಗೆ ಪಟ್ಟುಕೊಳ್ಳುವುದ್ಯಾಕೆ ಅನ್ನುವುದು ಕೂಡಾ ಗೊತ್ತಾಗಿತ್ತು.
ಇದೀಗ ಸಂಜನಾ ಮಾಡಿದ ಆರೋಪಗಳ ಕುರಿತಂತೆ ವಂದನಾ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮಾನನಷ್ಟ ಮೊಕದ್ದಮೆ ಹೂಡುವ ಕುರಿತಂತೆ ಲಾಯರ್ ನೊಟೀಸ್ ಕಳುಹಿಸಿಕೊಟ್ಟಿದ್ದಾರೆ.
ಸಂಜನಾ ವಿರುದ್ಧ 4 ಕೋಟಿಯ ಮಾನನಷ್ಟ ಕೇಸು ಹಾಕುವುದಾಗಿ ಹೇಳಿರುವ ವಂದನಾ ಜೈನ್ ಪ್ರಸ್ತುತ ಲಾಯರ್ ನೊಟೀಸ್ ಕಳುಹಿಸಿದ್ದಾರೆ. ಒಂದು ವೇಳೆ ಇದಕ್ಕೆ ಸಂಜನಾ ಸ್ಪಂದಿಸದೇ ಹೋದ್ರೆ ನ್ಯಾಯಾಲಯದಲ್ಲಿ ಮಾನ ನಷ್ಟ ಮೊಕದ್ದಮೆ ಹೂಡುವ ಸಾಧ್ಯತೆಗಳಿದೆ.
Discussion about this post