ಕರ್ನಾಟಕ ದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
ಕಲ್ಪತರು ನಾಡಿಗೆ ಇಂದು ಭೇಟಿ ಕೊಡಲಿರುವ ಪ್ರಧಾನಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನ ಮಂತ್ರಿಯಾದ ಬಳಿಕ ಎರಡು ಬಾರಿ ತುಮಕೂರಿಗೆ ಅಗಮಿಸಿದ್ದ ಪ್ರಧಾನಿಗಳು, ಇದೀಗ ತುಮಕೂರಿಗೆ ಮೂರನೆ ಬಾರಿ ಭೇಟಿ ನೀಡುತ್ತಿದ್ದಾರೆ.
ಸಿದ್ದಗಂಗಾ ಮಠ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ ಬಳಿಕ ರೈತ ಸಮ್ಮಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಮಧ್ಯಾಹ್ನ 1.20ಕ್ಕೆ ಯಲಹಂಕ ಏರ್ ಬೇಸ್ ನಲ್ಲಿ ಬಂದಿಳಿಯುವ ಪ್ರಧಾನಿ ಬಳಿಕ ಹೆಲಿಕಾಫ್ಟರ್ ಮೂಲಕ ತುಮಕೂರಿಗೆ ತೆರಳುತ್ತಾರೆ. 2 ಗಂಟೆಗೆ ಹೆಲಿಕಾಫ್ಟರ್ ಲ್ಯಾಂಡ್ ಆಗಲಿದೆ. ಬಳಿಕ ರಸ್ತೆ ಮಾರ್ಗದಲ್ಲಿ ತೆರಳುವ ಅವರು 2.15ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುತ್ತಾರೆ,. ಶ್ರೀಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ.
ಗದ್ದುಗೆ ಸಮೀಪವೇ ರುದ್ರಾಕ್ಷಿ ಗಿಡವೊಂದನ್ನು ನೆಡಲಿರುವ ಪ್ರಧಾನಿಗಳು ಶ್ರೀಗಳಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಈ ನಂತರ ಅರ್ಧ ಗಂಟೆಗಳ ಕಾಲ ಮಠದ ಮಕ್ಕಳೊಂದಿಗೆ ಸಂವಾದ ನಡೆಸುತ್ತಾರೆ. ಇದಾದ ನಂತರ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ತುಮಕೂರು ಕಾರ್ಯಕ್ರಮದ ನಂತರ ಸಂಜೆ ಬೆಂಗಳೂರಿಗೆ ಆಗಮಿಸುವ ಪ್ರಧಾನಿಗಳು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ -ಡಿಆರ್ಡಿಒಗೆ ಭೇಟಿ ನೀಡಿ, ರಾತ್ರಿ ರಾಜಭವನದಲ್ಲಿ ತಂಗಲಿದ್ದಾರೆ.
ಶುಕ್ರವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ಬಳಿಕ ನವದೆಹಲಿಗೆ ತೆರಳಲಿದ್ದಾರೆ.
ಮೋದಿ ಬೆಂಗಳೂರಿಗೆ ಬರ್ತಾರೆ ಅನ್ನುವುದು ಪಕ್ಕಾ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಮೋದಿ ಬರೋ ಮಾರ್ಗಕ್ಕೆ ಡಾಂಬರ್ ಸುರಿದಿದೆ. ನಿತ್ಯ ಹತ್ತಾರು ಹೊಂಡಗಳಿಂದ ಸಾರ್ವಜನಿಕರ ಪ್ರಾಣ ಹಿಂಡುತ್ತಿದ್ದ ರಸ್ತೆಗಳು ಮೋದಿ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದೆ.
ರಾತ್ರೋ ರಾತ್ರಿ ಸುಣ್ಣ ಬಣ್ಣ ಬಳಿದಿರುವ ಬಿಬಿಎಂಪಿ ಮೋದಿ ಕಣ್ಣಿಗೆ ಮಂಕು ಬೂದಿ ಎರಚಲು ಸಿದ್ದತೆ ನಡೆಸಿದೆ. ಮೋದಿ ಇವುಗಳನ್ನು ನೋಡಿದ್ರೆ What a beautiful bangalore ಅನ್ನಬೇಕು.
ಅಂದ ಹಾಗೇ ಮೋದಿ ಸ್ವಾಗತಕ್ಕಾಗಿ ಬಿಬಿಎಂಪಿ 2 ಕೋಟಿ ಖರ್ಚು ಮಾಡಿದೆ ಎಂದು ಸುದ್ದಿವಾಹಿನಿಯೊಂದು ತಿಳಿಸಿದೆ.
Discussion about this post