2014ರಲ್ಲಿ ತೆರೆಕಂಡ ಮರ್ದಾನಿ ಚಿತ್ರದ ಮುಂದುವರೆದ ಭಾಗವಾಗಿ ರಾಣಿ ಮುಖರ್ಜಿ ಮರ್ದಾನಿ 2 ತೆರೆಕಂಡಿದೆ.
ಮರ್ದಾನಿ 2 ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಮೊದಲ ದಿನವೇ ಸಿನಿಮಾ 5 ರಿಂದ 6 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಈ ನಡುವೆ ಸಿನಿಮಾ ಭರ್ಜರಿ ಸದ್ದು ಮಾಡುತ್ತಿರುವಂತೆ ನಟಿ ರಾಣಿ ಮುಖರ್ಜಿ ಶಿರಡಿ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಬಾಬಾ ಮೂರ್ತಿ ಮುಂದೆ ನಿಂತು ಭಾವುಕರಾದ ರಾಣಿ ಮುಖರ್ಜಿಯ ಕಣ್ಣಾಲಿಗಳು ತುಂಬಿ ಬಂದಿತ್ತು.
ಸಾಯಿ ಬಾಬಾ ದರ್ಶನ ಸಂದರ್ಭದಲ್ಲಿ ನಡೆದ ಘಟನೆ ಫೋಟೋಗಳು ಇದೀಗ ವೈರಲ್ ಆಗಿದೆ.
Discussion about this post