ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವೆ ಕುಶಲೋಪರಿ ನಡೆಯುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಈಶ್ವರಪ್ಪ, ನಿಮಗೂ ಹಾರ್ಟ್ ಇದೆ ಎಂದು ಗ್ಯಾರಂಟಿ ಆಯ್ತು ಎಂದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನನಗೆ ಹೃದಯ ಇಲ್ಲ ಅಂದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.
ಹೃದಯ ಇಲ್ಲ ಎಂದು ನಾನು ಯಾವಾಗಲಾದರೂ ಬಾಯಿ ಬಿಟ್ಟು ಹೇಳಿದ್ದೇನಾ? ಎಂದು ನಗೆಚಟಾಕಿ ಹಾರಿಸಿದರು. ಈಶ್ವರಪ್ಪ ಮಾತಿನಿಂದ ನಗೆ ಬೀರಿದ ಸಿದ್ದರಾಮಯ್ಯ ಅವರು, ಹ್ಯೂಮನ್ ಆನಾಟಮಿ ಏನ್ ಓದ್ಕೋಂಡಿದ್ದೀಯಾಪ್ಪ….! ಅಂದರು.
Discussion about this post