ಶಾಸಕರು ಸಂಸದರು ಅಂದ್ರೆ ಅವರು ಲೇಟ್ ಲತೀಫ್ ಗಳೆಂದು ಎಲ್ಲರಿಗೂ ಗೊತ್ತು. ಒಂದೆರೆಡು ಮಂದಿಯನ್ನು ಹೊರತು ಪಡಿಸಿದರೆ ಮತ್ಯಾವ ಜನಪ್ರತಿನಿಧಿಯೂ ನಿಗದಿತ ಕಾರ್ಯಕ್ರಮಕ್ಕೆ ಆಗಮಿಸಿದ ಉದಾಹರಣೆಗಳಿಲ್ಲ.
ಸಚಿವರು ಸಂಸದರು ಶಾಸಕರು ಬರೋ ಕಾರ್ಯಕ್ರಮ ಅಂದ್ರೆ ಅದು ಲೇಟಾಗಿಯೇ ಪ್ರಾರಂಭವಾಗುತ್ತದೆ. ಆದರೆ ಜನಪ್ರತಿನಿಧಿಗಳ ಸಮಯ ಪರಿಪಾಲನೆಗೆ ಒಂದಿಷ್ಟು ಬಿಸಿ ಮುಟ್ಟಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು.
ಇದೀಗ ಅವರದ್ದೇ ಹಾದಿಯಲ್ಲಿ ಕಾಣಿಸಿಕೊಂಡಿದ್ದು ರೈಲ್ವೆ ಸಚಿವ ಪಿಯೂಷ್ ಗೋಯಲ್.
ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ಆಯೋಜಿಸಲಾಗಿತ್ತು. ಸಭೆ ಮುಗಿಯುವುದು ಸ್ವಲ್ಪ ತಡವಾಯಿತು. ಸಂಸತ್ ಭವನದಲ್ಲಿ ಕಲಾಪ ಕೂಡ ನಡೆಯುತ್ತಿತ್ತು. ಈ ನಡುವೆ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ಕೋರಿ ಸಂಸದರೊಬ್ಬರು ನೋಟಿಸ್ ನೀಡಿದ್ದರು.
ಹೀಗಾಗಿ ಸಂಸದರ ಪ್ರಶ್ನೆಗೆ ಉತ್ತರಿಸಲು ತಡವಾಗುತ್ತದೆಯೆಂದು ಸಂಪುಟ ಸಭೆ ಮುಗಿಸಿ ಬಂದ ಗೋಯಲ್, ಕಾರು ಇಳಿದವರೇ ಸಂಸತ್ ಭವನದೊಳಗೆ ಬುಲೆಟ್ ಟ್ರೈನ್ ವೇಗದಲ್ಲಿ ನುಗ್ಗಿದರು. ಹೊರಗಡೆ ನಿಂತಿದ್ದ ಪತ್ರಕರ್ತರು ಸಚಿವ ವರ್ತನೆ ನೋಡಿ ಒಂದು ಕ್ಷಣ ಗಾಬರಿಯಾದರು.
ಟೈಮ್ ಕಮಿಟ್ ಮೆಂಟ್ ಬಗ್ಗೆ ಗೊತ್ತಾಗುತ್ತಿದ್ದಂತೆ ಸಚಿವ ಓಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರೈಲ್ವೆ ಸಚಿವರಿಗೆ ಇರುವ ಬುದ್ದಿ ನಮ್ಮ ಕರ್ನಾಟಕದ ಜನಪ್ರತಿನಿಧಿಗಳಿಗೂ ಇರುತ್ತಿದ್ರೆ, ಕರ್ನಾಟಕ ಯಾವತ್ತೋ ಕಲ್ಯಾಣ ರಾಜ್ಯವಾಗಿರುತ್ತಿತ್ತು.
Discussion about this post