ದೇವರು ಮತ್ತು ಭಕ್ತರ ನಡುವೆ ಕೊಂಡಿಯಾಗಬೇಕಾದ ಅರ್ಚಕರು ಭಗವಂತನ ಕಾಸು ದೋಚುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.ಮೂರು ವರ್ಷದ ಹಿಂದೆ ಕೊಲ್ಲೂರು ಮೂಕಾಂಬಿಕೆ ಬಂದ ಚಿನ್ನ, ಬೆಳ್ಳಿಯ ಆಭರಣಗಳನ್ನು ದೇವಸ್ಥಾನದ ಸಿಬ್ಬಂದಿಯೇ ಅಡವಿಟ್ಟು ಸಿಕ್ಕಿಬಿದ್ದಿದ್ದರು.
ಇದೀಗ ದೇವಸ್ಥಾನದ ಅರ್ಚಕರೊಬ್ಬರು ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ಭಕ್ತರಿಂದ ಕಾಸು ದೋಚಿದ ಪ್ರಕರಣ ಬೆಳಕಿಗೆ ಬಂದಿದೆ. ಹೆಸರಿಗೊಂದು ಪೂಜೆ ಮಾಡಿಸಿ ಪ್ರಸಾದ ಕಳುಹಿಸಿ ಲಕ್ಷಗಟ್ಟಲೆ ಕಾಸು ಜೇಬಿಗಿಳಿಸಿದ ಪೂಜಾರಿ ಪತ್ತೆಗೆ ಪೊಲೀಸರು ತಲಾಶ್ ಕೂಡಾ ಪ್ರಾರಂಭಿಸಿದ್ದಾರೆ.
ಇತ್ತೀಚೆಗೆ ದೇವಸ್ಥಾನಕ್ಕೆ ಹೊಸ ಸಿಓ ಬಂದ ವೇಳೆ ಎನೋ ಎಡವಟ್ಟಾಗಿದೆ ಅನ್ನುವ ಸುಳಿವು ಸಿಕ್ಕಿದೆ. ಪರಿಶೀಲನೆ ನಡೆಸಿದ್ರೆ ದೇವಸ್ಥಾನದ ಓರಿಜನಲ್ ವೆಬ್ ಸೈಟ್ ನಾಚಿಸುವಂತ ಮತ್ತೊಂದು ವೆಬೈ ಸೈಟ್ ಪತ್ತೆಯಾಗಿದೆ. ಥೇಟ್ ಕೊಲೂರು ದೇವಸ್ಥಾನದ ವೆಬ್ಸೈಟ್ ನಕಲು ಮಾಡಿ, ಫೋಟೋಗಳು, ಸೇವಾ ವಿವರಗಳೆಲ್ಲಾ ಒಂದೇ ರೀತಿ ಇರುವ ಹಾಗೆ ನಕಲಿ ವೆಬ್ಸೈಟ್ ರೂಪಿಸಲಾಗಿತ್ತು.
ಇದನ್ನು ನಂಬಿದ ಭಕ್ತರು ದೇವರ ಸೇವೆಗೆ ಈ ವೆಬ್ಸೈಟ್ನಲ್ಲಿ ಪೂಜೆ ಬುಕ್ ಮಾಡುತ್ತಿದ್ದರು. ಆದರೆ ಹಣ ಮಾತ್ರ ದೇವಸ್ಥಾನದ ಅಕೌಂಟಿಗೆ ಹೋಗದೇ ದೇವಸ್ಥಾನದ ಅರ್ಚಕರೊಬ್ಬರ ಖಾಸಗಿ ಖಾತೆಗೆ ಹೋಗಿ ಬೀಳುತ್ತಿತ್ತು.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಹಾಗಾದ್ರೆ ನಕಲಿ ವೆಬ್ ಸೈಟ್ ಬಗ್ಗೆ ತಿಳಿಯೋದು ಹೇಗೆ, ಅದಕ್ಕೊಂದು ಮಾರ್ಗವಿದೆ, ಆನ್ಲೈನ್ ವ್ಯವಹಾರ ಮಾಡುವ ಮಂದಿ ‘ಹೂ ಇಸ್ ಇಟ್’ ಅನ್ನೋ ವೆಬ್ಸೈಟ್ ಬಳಸಿ ಅದರಲ್ಲಿ ಯಾವುದು ಅಧಿಕೃತ ಯಾವುದು ಅನಧಿಕೃತ ವೆಬ್ಸೈಟ್ ಎಂಬ ಬಗ್ಗೆ ಪಿನ್ ಟು ಪಿನ್ ಡೀಟೇಲ್ಸ್ ಇರುತ್ತದೆ. ಅದನ್ನು ತಿಳಿದುಕೊಂಡು ವ್ಯವಹಾರ ಮುಂದುವರಿಸುವುದನ್ನು ರೂಡಿಸಿಕೊಳ್ಳುವುದು ಬೆಟರ್.
Discussion about this post