ಈ ಬಾರಿಯ ಉಪಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಸಮ್ಮಿಶ್ರ ಸರ್ಕಾರ ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದ ಸುಧಾಕರ್ ಅವರಿಗೆ ತಕ್ಕ ಪಾಠ ಕಲಿಸಲೇ ಬೇಕು ಎಂದು ತೀರ್ಮಾನಿಸಿರುವ ಅವರು ಈ ನಿಟ್ಟಿನಲ್ಲಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಉಸ್ತುವಾರಿಯಾಗಿ ನೇಮಕ ಮಾಡಿದ್ದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರನ್ನು ಆಯ್ಕೆ ಮಾಡಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಕೆ.ಪಿ ಬಚ್ಚೇಗೌಡ ಅವರನ್ನು ಬದಲಾಯಿಸಿದ ದಳಪತಿಗಳು, ಜೆಡಿಎಸ್ ಶಿಡ್ಲಘಟ್ಟ ತಾಲೂಕು ನಾಗಮಂಗಲ ನಿವಾಸಿ ರಾಧಾಕೃಷ್ಣ ಅವರಿಗೆ ಮಣೆ ಹಾಕಿದ್ದರು.
ಹೀಗಾಗಿ ರಾಧಾಕೃಷ್ಣ ಮತ್ತು ಕೆಪಿ ಬಚ್ಚೇಗೌಡ ಒಂದೇ ಭಿ ಫಾರಂನಲ್ಲಿ ನಾಮಪತ್ರ ಸಲ್ಲಿಸಿದ್ದರು. ಇದೀಗ ನಾಮಪತ್ರ ಪರಿಶೀಲನೆ ನಡೆಯುತ್ತಿದ್ದು, ಕೆಪಿ ಬಚ್ಚೇಗೌಡ ಅವರ ನಾಮ ಪತ್ರ ತಿರಸ್ಕೃತಗೊಂಡಿದೆ. ರಾಧಾಕೃಷ್ಣ ಅವರ ನಾಮಪತ್ರ ಸಿಂಧುವಾಗಿದೆ.
ಹೀಗಾಗಿ ಕೊನೆಯ ಕ್ಷಣದಲ್ಲಿ ಆಯ್ಕೆಯಾದ ಜೆಡಿಎಸ್ ಅಭ್ಯರ್ಥಿಯೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಆದರೆ ಮಾಜಿ ಶಾಸಕರಾಗಿರುವ ಬಚ್ಚೇಗೌಡರು ಇದೀಗ ಚುನಾವಣಾ ಪ್ರಕ್ರಿಯೆಯಲ್ಲಿ ಯಾವ ರೀತಿ ಪಾಲ್ಗೊಳ್ಳುತ್ತಾರೆ ಅನ್ನುವುದೇ ಕುತೂಹಲ.
Discussion about this post