ಮೈಸೂರಿನಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡ ಗಾಯಕ ಚಂದನ್ ಶೆಟ್ಟಿಗೆ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
ವೇದಿಕೆಯಲ್ಲಿ ಗಾಯಕ ಚಂದನ್ ಶೆಟ್ಟಿ ನಿವೇದಿತಾ ಗೌಡಾಗೆ ಪ್ರಪೋಸ್ ಮಾಡಿದ ಪ್ರಕರಣದ ಬಗ್ಗೆ ಎಸ್ಪಿ ರಿಷ್ಯಂತ್ ಚಂದನ್ ಶೆಟ್ಟಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಈ ರೀತಿ ವರ್ತನೆ ಮರುಕಳಿಸಿದರೆ ಸರ್ಕಾರಿ ಕಾರ್ಯಕ್ರಮದಿಂದ ನಿಮ್ಮನ್ನು ಬ್ಯಾನ್ ಮಾಡುತ್ತೇವೆ ಎಂದು ಚಂದನ್ ಶೆಟ್ಟಿಗೆ ಎಚ್ಚರಿಕೆ ಪೊಲೀಸರು ಗಂಭೀರವಲ್ಲದ ಅಪರಾಧ ಪ್ರಕರಣವನ್ನು ಕೂಡ ದಾಖಲು ಮಾಡಿದ್ದು ವಿಚಾರಣೆ ಮುಂದುವರಿಸಿದ್ದಾರೆ.
ಇನ್ನು ಸರ್ಕಾರಿ ವೇದಿಕೆಯಲ್ಲಿ ಚಂದನ್ ಪ್ರಪೋಸ್ ಮಾಡಿದ ಪ್ರಕರಣದ ಬಗ್ಗೆ ಅಂತಿಮ ತೀರ್ಮಾನವನ್ನು ಜಿಲ್ಲಾಧಿಕಾರಿಗಳು ಕೈಗೊಳ್ಳಬೇಕು ಎಂದು ಹೇಳಿರುವ ಪೊಲೀಸ್ ವರಿಷ್ಠಾಧಿಕಾರಿಗಳು ವೇದಿಕೆಯಲ್ಲಿ ನಾನು ಮದುವೆ ಅಥವಾ ಎಂಗೆಜ್ಮೆಂಟ್ ಆಗಿಲ್ಲ. ವೇದಿಕೆ ಮೇಲೆ ಜನರ ಮುಂದೆ ನಿವೇದಿತಾ ಅವರ ಗಮನ ಸೆಳೆಯಲು ಪ್ರಪೋಸ್ ಮಾಡಿದೆ. ಅದರಲ್ಲಿ ಬೇರೆ ಉದ್ದೇಶ ಇರಲಿಲ್ಲ ಎಂದು ಚಂದನ್ ಶೆಟ್ಟಿ ಸ್ಪಷ್ಟನೆ ಕೊಟ್ಟಿರುವುದಾಗಿ ಹೇಳಿದ್ದಾರೆ.
ಆದರೆ ಚಂದನ್ ಶೆಟ್ಟಿ ಏನೇ ಹೇಳಬಹುದು. ಆದರೆ ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ. ಕಾರ್ಯಕ್ರಮಕ್ಕೂ ಮುನ್ನ ಅವರ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಪೋಸ್ಟ್, ಕಾರ್ಯಕ್ರಮದ ನಂತರ ಮಾಡಿದ ಪೋಸ್ಟ್ ಗಳನ್ನು ನೋಡಿದರೆ ಅದು ಸ್ಪಷ್ಟವಾಗುತ್ತದೆ.
ಪ್ರಕರಣದ ಗಂಭೀರತೆಯನ್ನು ಗಮನಿಸಿ ಕೇವಲ ಎಚ್ಚರಿಕೆ ಕೊಡುವ ಬದಲು ಕನಿಷ್ಟ ಕಾರ್ಯಕ್ರಮದ ವೆಚ್ಚವನ್ನಾದರೂ ಚಂದನ್ ಶೆಟ್ಟಿಯಿಂದ ವಸೂಲಿ ಮಾಡುವುದು ಉತ್ತಮ. ಸರ್ಕಾರಿ ದುಡ್ಡು ಅಂದ್ರೆ ಜನರ ತೆರಿಗೆ ದುಡ್ಡಿನಲ್ಲಿ ತನ್ನ ಖಾಸಗಿ ಕಾರ್ಯಕ್ರಮ ನಡೆಸಿದ್ದಾರೆ ಅಂದ್ರೆ ಅರ್ಥವೇನು.
Discussion about this post