ಕನ್ನಡ ರಾಜ್ಯೋತ್ಸವದಂದು ರಾಷ್ಟ್ರ ಧ್ವಜವನ್ನು ಹಾರಿಸುವ ಕುರಿತಂತೆ ಸರ್ಕಾರ ಯಾವುದೇ ಆದೇಶ ನೀಡಿಲ್ಲ. ಇದು ಅಧಿಕಾರಿಯೊಬ್ಬರಿಂದ ಆಗಿರುವ ಎಡವಟ್ಟು. ಇದು ಓರ್ವ ಅಧಿಕಾರಿಯ ತಪ್ಪಿನಿಂದ ನಡೆದ ಘಟನೆಯಾಗಿದೆ. ಅದಕ್ಕೆ ಇಡೀ ಸರ್ಕಾರವನ್ನು ಆರೋಪಿಸುವುದು, ಟೀಕಿಸುವುದು ಸರಿಯಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕನ್ನಡ ರಾಜ್ಯೋತ್ಸವದಂದು ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಹೊರ ಬಿದ್ದ ಸುತ್ತೋಲೆಯಿಂದ ಆಗಿರುವ ಡ್ಯಾಮೇಜ್ ಅನ್ನು ಕಂಟ್ರೋಲ್ ಮಾಡಲು ಮುಂದಾಗಿರುವ ಸುರೇಶ್ ಕುಮಾರ್, ಈ ಆದೇಶವನ್ನು ಸರ್ಕಾರ ಹೊರಡಿಸಿರಲೇ ಇಲ್ಲ. ಕೊಪ್ಪಳ ಜಿಲ್ಲಾ ಶಿಕ್ಷಣಾಧಿಕಾರಿ ಹೀಗೊಂದು ಸೂಚನೆ ನೀಡಿದ್ದರು. ಅದರಲ್ಲಿ, “ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ನಾಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ರಾಷ್ಟ್ರಧ್ವಜ ಹಾರಿಸಬೇಕು,” ಎಂದು ಹೇಳಲಾಗಿತ್ತು. ಆದರೆ, ಸುತ್ತೋಲೆಯಲ್ಲಿ ಎಲ್ಲಿಯೂ ಕನ್ನಡ ಧ್ವಜ ಹಾರಿಸಬೇಕೆಂಬುದರ ಬಗ್ಗೆ ಉಲ್ಲೇಖ ಮಾಡಿಲ್ಲ ಅಂದಿದ್ದಾರೆ.
ಗೊಂದಲದ ಸುತ್ತೋಲೆ ಹೊರಡಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದ ಹಾಗೂ ಜನರ ಆಕ್ರೋಶಕ್ಕೆ ಕಾರಣವಾಗುವಂತೆ ಮಾಡಿದ್ದ ಕೊಪ್ಪಳ ಶಿಕ್ಷಣಾಧಿಕಾರಿ ಸುಜಾತ ಅವರನ್ನು ಅಮಾನತು ಮಾಡಿರುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ‘ಕನ್ನಡ ರಾಜ್ಯೋತ್ಸವ ಆಚರಣೆ ವ್ಯವಸ್ಥೆ ಕುರಿತು ತಪ್ಪು ಗ್ರಹಿಕೆ ಬರುವಂತೆ ಸುತ್ತೋಲೆ ಹೊರಡಿಸಿರುವ ಕೊಪ್ಪಳದ ಶಿಕ್ಷಣಾಧಿಕಾರಿಯಿಂದ ವಿವರಣೆ ಕೇಳಿ ನೋಟಿಸ್ ನೀಡಲಾಗಿದೆ. ಹಾಗೇ ತಕ್ಷಣವೇ ಅಮಾನತಿನಲ್ಲಿ ಇಡಬೇಕೆಂದು ಸೂಚನೆ ನೀಡಿದ್ದೇನೆ’ ಎಂದು ಟ್ವಿಟ್ಟರ್ನಲ್ಲಿ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಆದರೆ ಈ ಹಿಂದೆಯೂ ಕನ್ನಡ ರಾಜ್ಯೋತ್ಸವದಂದು ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತಿತ್ತು. ಜೊತೆಗೆ ಕನ್ನಡ ಧ್ವಜವನ್ನು ಅರಳಿಸುವ ಸಂಪ್ರದಾಯವಿತ್ತು. ಆದರೆ ಕೇಂದ್ರದ ಸಚಿವರೊಬ್ಬರು ಕನ್ನಡ ರಾಜ್ಯೋತ್ಸವದಂದು ರಾಷ್ಟ್ರ ಧ್ವಜ ಹಾರಾಡಬೇಕು ಎಂದು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದರು. ಇದಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಅಂದ್ರೆ ಸಮ್ ಥಿಂಗ್ ರಾಂಗ್ ಅನ್ನಿಸುವುದು ಸಹಜ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ರಾಷ್ಟ್ರ ಧ್ವಜ ಮತ್ತು ಕನ್ನಡ ಧ್ವಜವನ್ನು ಕರ್ನಾಟಕ ರಾಜ್ಯೋತ್ಸವದಂದು ಹಾರಿಸುತ್ತಾರೆ, ಆದರೆ ಸಚಿವರು ಯಾಕೆ ಈ ಕ್ರಮವನ್ನು ಫಾಲೋ ಮಾಡಿಲ್ಲ. ಸಚಿವರು ಅದ್ಯಾಕೆ ಜನರ ಭಾವನೆಗಳ ಜೊತೆ ಆಟವಾಡಿದರು.
Discussion about this post