ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಇದೀಗ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಂಗಳವಾರ ಕನಕಪುರದ ಕಬ್ಬಾಳಮ್ಮ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲು ಡಿ.ಕೆ.ಶಿವಕುಮಾರ್ ಕುಟುಂಬ ಆಗಮಿಸಿತ್ತು.
ಈ ವೇಳೆ ದೇವಸ್ಥಾನ ಹೊರಭಾಗದಲ್ಲಿ ಸುದ್ದಿ ಮಾಧ್ಯಮದ ಕ್ಯಾಮರಾಮನ್ಗಳು ಪೂಜೆ ಮುಗಿಸಿ ಡಿಕೆಶಿ ಕುಟುಂಬಸ್ಥರು ಹೊರಬರುತ್ತಿದ್ದಂತೆ ಚಿತ್ರೀಕರಣ ಮಾಡಲಾರಂಭಿಸಿದರು.
ಇದರಿಂದ ಕೆಂಡಾಮಂಡಲಾರದ ಡಿಕೆಶಿ ಪುತ್ರಿ ಐಶ್ವರ್ಯ ಫುಲ್ ಗರಂ ಆಗಿ ನೀವು ಶಿವಕುಮಾರ್ ವಿಡಿಯೋ ಮಾತ್ರ ತೆಗೆಯಬೇಕು. ಕುಟುಂಬದವರನ್ನು ಚಿತ್ರೀಕರಿಸಬಾರದು. ನಿಮ್ಮ ಕ್ಯಾಮರಾಗಳನ್ನು ಆಫ್ ಮಾಡಿ ಎಂದು ಏರು ಧ್ವನಿಯಲ್ಲೇ ಗದರಿದ್ದಾರೆ.
ಹಾಗೇ ನೋಡಿದರೆ ಡಿಕೆಶಿ ಪುತ್ರಿ ಹೇಳುವುದರಲ್ಲಿ ತಪ್ಪೇನಿಲ್ಲ. ಮನೆ ದೇವರಿಗೆ ಪೂಜೆ ಸಲ್ಲಿಸಲು ಡಿಕೆಶಿ ಕುಟುಂಬ ಮಂದಿ ಬಂದಿದ್ದಾರೆ ಅಂದ ಮೇಲೆ ಅದು ಪಕ್ಕಾ ಖಾಸಗಿ ಕಾರ್ಯಕ್ರಮ. ಅಂತಹ ಸಂದರ್ಭದಲ್ಲಿ ಮಾಧ್ಯಮಗಳು ಖಾಸಗಿ ಕಾರ್ಯಕ್ರಮದಲ್ಲೂ ಮೂಗು ತೂರಿಸುವುದು ಸರಿಯಲ್ಲ. ಇನ್ನು ಡಿಕೆಶಿ ಮಾಡಿರುವ ತಪ್ಪಿಗೆ ಪತ್ನಿ ಮಕ್ಕಳನ್ನು ಪದೇ ಪದೇ ಟಿವಿಯಲ್ಲಿ ತೋರಿಸುವುದು ಕೂಡಾ ಸರಿಯಲ್ಲ. ಡಿಕೆಶಿ ಪತ್ನಿ ಮತ್ತು ಮಕ್ಕಳು ಮೇಲ್ನೋಟಕ್ಕೆ ತಪ್ಪು ಮಾಡಿದಂತಿಲ್ಲ. ಅವರು ತಪ್ಪು ಮಾಡಿದ್ದಾರೆಯೇ ಇಲ್ಲವೇ ಅನ್ನುವುದು ತನಿಖೆಯಿಂದ ಗೊತ್ತಾಗಬೇಕಾಗಿದೆ. ಅಪ್ಪ ಮಾಡಿದ ತಪ್ಪಿಗೆ ಮಗಳನ್ನು ನಿತ್ಯ ಟಿವಿಯಲ್ಲಿ ತೋರಿಸುವುದು ಯಾವ ನ್ಯಾಯ. ಹೀಗಾಗಿಯೇ ಐಶ್ವರ್ಯಾ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅವರು ತಪ್ಪು ಮಾಡಿದ್ದಾರೆ ಅನ್ನುವುದು ಸಾಬೀತಾದರೆ ಟಿವಿಯಲ್ಲಿ ತೋರಿಸಿದರೆ ತಪ್ಪೇನಿಲ್ಲ ಬಿಡಿ.
ಇನ್ನು ಐಶ್ವರ್ಯಾ ಅವರ ವಿಡಿಯೋ ಬೇಕೇ ಬೇಕು ಅನ್ನುವಂತಿದ್ದರೆ ಇಡಿ, ಸಿಬಿಐ, ಐಟಿ ವಿಚಾರಣೆಗೆ ಅವರ ಹಾಜರಾಗುವ ಸಂದರ್ಭದಲ್ಲಿ ಚಿತ್ರೀಕರಿಸಿಕೊಳ್ಳಲು ಅಡ್ಡಿಯಿಲ್ಲ. ಯಾಕೆಂದರೆ ಅದೇನೂ ಅವರ ಖಾಸಗಿ ಕಾರ್ಯಕ್ರಮವಲ್ಲ. ಕಾನೂನಿಗೆ ವಂಚಿಸಿದ್ದಾರೆ ಅನ್ನುವ ಅನುಮಾನದ ಹಿನ್ನಲೆಯಲ್ಲಿ ಅವರನ್ನು ವಿಚಾರಣೆಗೆ ಕರೆಸಿಕೊಳ್ಳಲಾಗಿರುತ್ತದೆ.
Discussion about this post