ಲಿಂಗಾಯಿತ, ಒಕ್ಕಲಿಗ ಸಮುದಾಯಗಳು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರಿಂದ ದೂರವಾಗುತ್ತಿರುವ ಕುರಿತಂತೆ ಹಾಗೂ ಡಿಕೆಶಿ ಜೆಡಿಎಸ್ ಬಾವುಟ ಹಿಡಿದ ಕುರಿತ ತಾವು ಆಡಿದ್ದ ಮಾತನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ತಾವು ಜಾತ್ಯತೀತವಾದಿಯಾಗಿದ್ದು, ಜನರೂ ಜಾತ್ಯತೀತವಾಗಿ ಯೋಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಾಗೇ ನೋಡಿದರೆ ಸಿದ್ದರಾಮಯ್ಯ ಹೇಳಿರುವ ಮಾತುಗಳಲ್ಲಿ ತಪ್ಪೇನಿಲ್ಲ. ಡಿಕೆಶಿ ಕಾಂಗ್ರೆಸ್ ನಾಯಕರಾಗಿದ್ದುಕೊಂಡು ಮೆರವಣಿಗೆಯಲ್ಲಿ ಜೆಡಿಎಸ್ ಬಾವುಟ ಹಿಡಿಯುತ್ತಾರೆ ಅಂದ್ರೆ ಅರ್ಥವೇನು.ಮುಂಬರಲಿರುವ ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅನೇಕ ಕಡೆಗಳಲ್ಲಿ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿಯಲಿದೆ. ಇಲ್ಲಿ ಬಾವುಟ ಹಿಡಿದ್ರೆ ತಳಮಟ್ಟದ ಕಾರ್ಯಕರ್ತರಿಗೆ ಅದ್ಯಾವ ಸಂದೇಶ ರವಾನೆಯಾಗುತ್ತದೆ.
ಕುಮಾರಸ್ವಾಮಿ ಮತ್ತು ಡಿಕೆಶಿ ಒಂದು ಕಾಲದಲ್ಲಿ ಬದ್ಧ ವೈರಿಗಳಾಗಿದ್ದವರು. ಡಿಕೆಶಿ ಅಕ್ರಮಗಳ ಕುರಿತಂತೆ ಸದನದಲ್ಲೇ ಗುಡುಗಿದವರು ಕುಮಾರಸ್ವಾಮಿ. ಆದರೆ ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಬ್ಬರೂ ದೋಸ್ತಿಗಳಾಗಿದ್ದಾರೆ. ಆ ದೋಸ್ತಿ ಅವರ ಖಾಸಗಿ ಮಟ್ಟದಲ್ಲಿ ಇದ್ದರೆ ಚೆಂದ ಎಂದು ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿರುವ ಸಿದ್ದರಾಮಯ್ಯ ಬಯಸುವುದರಲ್ಲಿ ತಪ್ಪೇನಿದೆ.
ಹಳದಿ ಕಣ್ಣಿನ ಮಾಧ್ಯಮಗಳಿಗೆ ಇದು ತಪ್ಪಾಗಿ ಕಂಡಿರಬಹುದು ಅಷ್ಟೇ..
Discussion about this post