ಅಕ್ರಮ ಆಸ್ತಿ ಆರೋಪದಲ್ಲಿ ಜೈಲು ಸೇರಿರುವ ಡಿಕೆಶಿಯವರಿಗೆ ಎಂಥಾ ಅಭಿಮಾನಿಗಳಿದ್ದಾರೆ ಅನ್ನುವುದು ಶನಿವಾರ ಸಾಬೀತಾಗಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಜನ ಪರದಾಡುತ್ತಿದ್ದರೂ ಅದನ್ನು ಲೆಕ್ಕಿಸದ ಅಭಿಮಾನಿಗಳು ಕ್ರೇನ್ ತಂದು ಸೇಬಿನ ಹಾರ ಹಾಕಿದಾಗಲೇ ಗೊತ್ತಾಗಿತ್ತು ಡಿಕೆಶಿ ತಾಕತ್ತು ಎಂತಹುದು ಎಂದು.
ಗಡಿ ದೇಶಕ್ಕಾಗಿ ಹುತಾತ್ಮನಾದ ಯೋಧನ ಪಾರ್ಥಿವ ಶರೀರ ಬಂದರೂ ಸೇರಿದ ಜನ ಡಿಕೆಶಿಯನ್ನು ಸ್ವಾಗತಿಸಲು ಬಂದಿದ್ದಾರೆ ಅಂದ ಮೇಲೆ ಡಿಕೆ ಖದರ್ ಎಂತಹುದು ಅನ್ನುವುದನ್ನು ಯೋಚಿಸಬಹುದಾಗಿದೆ.
ಈ ನಡುವೆ ಡಿಕೆಶಿ ಅಭಿಮಾನಿಯೊಬ್ಬ ನನ್ನ ಮೆಚ್ಚಿನ ನಾಯಕ ಸಿಎಂ ಆಗದ ಹೊರತು ನಾನು ಮದುವೆಯೇ ಆಗುವುದಿಲ್ಲ ಅಂದಿದ್ದಾನೆ.
ರಿಜ್ವಾನ್ ಪಾಷ ಎಂಬಾತ ಈ ಸಂಬಂಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ನಾನು ಮದುವೆಯಾಗಬೇಕಾದರೆ ಡಿಕೆಶಿ ಸಿಎಂ ಆಗಬೇಕು ಅಂದಿದ್ದಾನೆ.
ಮಂಡ್ಯದಲ್ಲಿ ಯಡಿಯೂರಪ್ಪ ಅಭಿಮಾನಿಯೊಬ್ಬ ಸಾಹೇಬ್ರು ಸಿಎಂ ಆದ ಮೇಲೆ ಚಪ್ಪಲಿ ಹಾಕ್ತೀನಿ ಎಂದು ಶಪಥ ಹಾಕಿದ್ದರು. ಹಾಗೋ ಹೀಗೋ ಯಡಿಯೂರಪ್ಪ ಸಿಎಂ ಆದರೂ, ಇದೀಗ ಮದುವೆ ಭಾಗ್ಯಕ್ಕಾಗಿ ಡಿಕೆಶಿ ಸಿಎಂ ಆಗಬೇಕಾಗಿದೆ.
Discussion about this post