ಯಕ್ಷಗಾನ ಪ್ರಿಯ ಆಕ್ರೋಶಕ್ಕೆ ಕೊನೆಗೂ ವಿಜಯ ಸಂಕೇಶ್ವರ ಒಡೆತನದ ದಿಗ್ವಿಜಯ ನ್ಯೂಸ್ ಮಣಿದಿದೆ. ಆದರೂ ಇದು ಬಾಯಿ ತಪ್ಪಿನಿಂದ ಆಡಿರುವ ಮಾತು ಎಂದು ಕ್ಷಮೆಯಾಚಿಸುವ ಸಂದರ್ಭದಲ್ಲಿ ವಾಹಿನಿಯ ಸಂಪಾದಕ ಸುಭಾಷ್ ಹೂಗಾರ್ ಹೇಳಿರುವುದನ್ನು ನೋಡಿದರೆ ಇದೊಂದು ಬೀಸೋ ದೊಣ್ಣೆಯಿಂದ ತಪ್ಪಿಸಲು ಕೇಳಿದ ಕ್ಷಮೆ ಅನ್ನುವುದರಲ್ಲಿ ಸಂಶಯವಿಲ್ಲ.
ಇದೇ ವಿಡಿಯೋದಲ್ಲಿ ನಿರೂಪಕಿ ಸೌಖ್ಯ ಗೌಂವ್ಕರ್ ಯಕ್ಷಗಾನವನ್ನು ನೋಡಿ ಬೆಳೆದವರು, ಯಕ್ಷಗಾನದ ಅಪಾರ ಪ್ರೀತಿ ಗೌರವನ್ನು ಇಟ್ಟುಕೊಂಡವರು ಎಂದು ಸಂಪಾದಕ ಸುಭಾಷ್ ಹೂಗಾರ್ ವಿವರಿಸಿದ್ದಾರೆ.
ಮಾನ್ಯ ಸಂಪಾದಕರೇ ಯಕ್ಷಗಾನವನ್ನು ನೋಡಿ ಬೆಳೆದವರಾಗಿದ್ದರೆ, ಗೌರವ ಇಟ್ಟುಕೊಂಡವರಾಗಿದ್ದರೆ ಕಲಾವಿದರು ಎಣ್ಣೆ ಹೊಡೆದರೆ ಡೈಲಾಗ್ ಬರುತ್ತದೆ ಎಂದು ನಿರೂಪಕಿ ಹೇಳುತ್ತಿರಲಿಲ್ಲ. ಕೆಲ ಕಲಾವಿದರಿಗೆ ಎಣ್ಣೆ ಹೊಡೆಯದಿದ್ದರೆ ಡೈಲಾಗ್ ಹೊರಡುವುದಿಲ್ಲ ಅನ್ನುತ್ತಿದ್ದರು. ನೀವೇ ಹೇಳಿದಂತೆ ಅವರು ಉತ್ತರ ಕನ್ನಡವರು. ಯಕ್ಷಗಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಹಿರಿಮೆ ಉತ್ತರ ಕರ್ನಾಟಕದ ಅನೇಕ ಕಲಾವಿದರದ್ದು. ನಿರೂಪಕಿ ಯಕ್ಷಗಾನವನ್ನು ನೋಡಿ ಬೆಳೆದವರಾಗಿದ್ದರೆ ಕಲಾವಿದರು ಎಣ್ಣೆ ಹೊಡೆದು ಶ್ರೀಮಂತಗೊಳಿಸಿದ್ದಾರೆ ಅನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ ಅಂದಾಯ್ತು.
ಏನಿವೇ ನಿರೂಪಕಿಯೊಬ್ಬರ ತಪ್ಪಿಗೆ ಸಂಪಾದಕರು ತಲೆ ತಗ್ಗಿಸುವಂತಾಗಿದೆ. ಹೀಗಾಗಿ ಈ ವಿಷಯವನ್ನುಇಲ್ಲಿಗೆ ಮುಕ್ತಾಯಗೊಳಿಸೋಣ. ಮುಂದಿನ ದಿನಗಳಲ್ಲಿ ಇದು ಎಲ್ಲಾ ವಾಹಿನಿಗಳಿಗೆ ಪಾಠವಾಗಲಿ ಅನ್ನುವುದು ಎಲ್ಲರ ಆಶಯ.
Discussion about this post