ಝೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕರ್ನಾಟಕದೆಲ್ಲೆಡೆ ಮನೆ ಮಾತಾದ ಹಾವೇರಿ ಹನುಮಂತು ಇದೀಗ ಕರ್ನಾಟಕ ಸುದ್ದಿ ವಾಹಿನಿಗಳಿಗೆ TRP ಸರಕು.
ಬೆಳಕು ಹರಿದ್ರೆ ಸಾಕು, ಹನುಮಂತು ದಿನಚರಿಯ ಕುರಿತಂತೆ ಹತ್ತಾರು ಕಾರ್ಯಕ್ರಮ ಪ್ರಸಾರವಾಗುತ್ತದೆ. ಹನುಮಂತು ಹೆಸರಿನಲ್ಲಿ ಕಾರ್ಯಕ್ರಮ ಮಾಡಿದರೆ TRP ಬರುವ ಕಾರಣದಿಂದಲೇ ಸುದ್ದಿ ವಾಹಿನಿಗಳಿಗೆ ಹನುಮಂತು ಹಾಟ್ ಕೇಕ್.
ಸಾಮಾಜಿಕ ಜಾಲತಾಣಗಳಲ್ಲಿ ಜನ ಸುದ್ದಿ ವಾಹಿನಿಗಳಿಗೆ ಛೀ…ಥೂ ಎಂದು ಉಗಿಯುತ್ತಿದ್ದಾರೆ. ಆದರೂ ಕಾರ್ಯಕ್ರಮಗಳಿಗೆ TRP ಗೆ ಬರವಿಲ್ಲ. ಅಂದರೆ ಉಗಿಯುವ ಮಂದಿಯೇ ಕಾರ್ಯಕ್ರಮ ನೋಡುತ್ತಿದ್ದಾರೆ ಅಂದಾಯ್ತು.
Discussion about this post