ನನಗೆ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನೀಡಿದ ಮೇಲೆ ಇಡೀ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಪ್ರತಿ ಜಿಲ್ಲೆಯ ಕಾರ್ಯಕರ್ತರನ್ನು ಭೇಟಿ ಮಾಡಿ ಸಂಘಟನೆಯ ಪರ್ವ ನಡೆಸುತ್ತಿದ್ದೇವೆ. ಮತಗಟ್ಟೆ ಸಮಿತಿ ರಚನೆ ಮಾಡುವುದು, ಸದಸ್ಯತ್ವ ಅಭಿಯಾನಕ್ಕೆ ವೇಗ ನೀಡುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದೇವೆ. ಈಗಾಗಲೇ 31 ಜಿಲ್ಲೆಗಳ ಪ್ರವಾಸ ಮಾಡಿದ್ದು, ರಾಯಚೂರಿನ ನಂತರ ಯಾದಗಿರಿ 32ನೇ ಜಿಲ್ಲೆಗೆ ಆಗಮಿಸಿದ್ದೇನೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ 32 ಜಿಲ್ಲೆಗಳಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಯಾದಗಿರಿಯ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ 30 ಜಿಲ್ಲೆಗಳನ್ನು 32 ಏರಿಸಿದ್ದರು.ಆನಂದ್ ಸಿಂಗ್ ಅವರಿಗೆ ಬಳ್ಳಾರಿ ಮತ್ತು ವಿಶ್ವನಾಥ್ ಅವರಿಗಾಗಿ ಮೈಸೂರನ್ನು ಇಭ್ಬಾಗ ಮಾಡುವ ಯೋಜನೆ ಇದೆಯೋ ಗೊತ್ತಿಲ್ಲ.
ಹೋಗ್ಲಿ ಮೊದಲ ಸಲ ಏನೋ ಬಾಯಿ ತಪ್ಪಿ ನಳಿನ್ ಈ ಮಾತು ಆಡಿದ್ದಾರೆ ಅಂದುಕೊಳ್ಳೋಣ. ಆದರೆ ಮತ್ತೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರು ಕರ್ನಾಟಕದ ಒಟ್ಟು ಜಿಲ್ಲೆಯ ಸಂಖ್ಯೆಯನ್ನು 34ಕ್ಕೆ ಏರಿಸಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಅನ್ನುವಂತೆ ಯಡಿಯೂರಪ್ಪ ಅವರು ಸಿಎಂ ಆದ ನಂತರ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಟ್ಟರು. ಆ ಹುದ್ದೆಯನ್ನು ನನಗೆ ನೀಡಲಾಯ್ತು. ಇದೀಗ 34 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡಬೇಕು ಅನ್ನುವ ಮೂಲಕ ಕರ್ನಾಟಕ ಮತ್ತೆ 4 ಜಿಲ್ಲೆಗಳನ್ನು ಸೇರಿಸಿದರು.
ಮಂಗಳೂರಿ ಜನ ಬುದ್ದಿವಂತರು ಅಂತಾರೆ. ಆದರೆ ನಳಿನ್ ಕುಮಾರ್ ಮಾತು ಕೇಳಿದ ಮೇಲೂ ದಕ್ಷಿಣ ಕನ್ನಡವನ್ನು ಬುದ್ದಿವಂತರ ಜಿಲ್ಲೆ ಎಂದು ಕರೆಯಬೇಕಾ…?
Discussion about this post