ಮಾಜಿ ಸಚಿವ ಡಿಕೆ ಶಿವಕುಮಾರ್ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೆ ಐಟಿ ಶಾಕ್ ನೀಡಿದೆ. ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ತುಮಕೂರಿನಲ್ಲಿರುವ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು, ಪದವಿ ಕಾಲೇಜುಗಳ ಮೇಲೆ ಬೆಂಗಳೂರು ಐಟಿ ಸೆಲ್ ಅಧಿಕಾರಿಗಳು ಏಕಕಾಲದಲ್ಲಿ ಶಿಕ್ಷಣ ಸಂಸ್ಥೆ ಮತ್ತು ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಇದೀಗ ಐಟಿ ಅಧಿಕಾರಿಗಳು ಕಾಲೇಜು ಹಾಗೂ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ತುಮಕೂರಷ್ಟೇ ಅಲ್ಲ, ನೆಲಮಂಗಲದಲ್ಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನೆಲಮಂಗಲದಲ್ಲಿರುವ ಪರಮೇಶ್ವರ್ ಒಡೆತನದ ಮೆಡಿಕಲ್ ಕಾಲೇಜು ಮೇಲೂ ದಾಳಿ ನಡೆದಿದೆ. ಜೊತೆಗೆ ಸದಾಶಿವನಗರದ ಅವರ ನಿವಾಸದ ಮೇಲೂ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.
ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್, “ನಮ್ಮ ಸಂಸ್ಥೆ ಮೇಲೆ ಐಟಿ ದಾಳಿ ಮಾಡಲಿ ಸಂತೋಷ. ನಮ್ಮಲ್ಲಿನ ತಪ್ಪುಗಳಿದ್ದರೆ ದಾಳಿ ಮಾಡಲಿ ಅನ್ನುವ ಮೂಲಕ ನಾನು ಕ್ಲೀನ್ ಹ್ಯಾಂಡ್ ಅಂದಿದ್ದಾರೆ. ಡಿಕೆಶಿ ಶಿವಕುಮಾರ್ ಹೀಗೆ ಹೇಳಿದ್ದರು ಅನ್ನುವುದನ್ನು ಈಗ ನೆನಪಿಸಿಕೊಳ್ಳಬಹುದಾಗಿದೆ.
ಈ ನಡುವೆ ಕಾಂಗ್ರೆಸ್ ಹಿರಿಯ ಮುಖಂಡ ಆರ್.ಎಸ್. ಜಾಲಪ್ಪ ನಿವಾಸ ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ. ಕೋಲಾರದಲ್ಲಿರುವ ಜಾಲಪ್ಪ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟಿರುವ ಐಟಿ ಅಧಿಕಾರಿಗಳು ಅಕ್ರಮದ ಆರೋಪಕ್ಕೆ ಸಾಕ್ಷಿ ಹುಡುಕುತ್ತಿದ್ದಾರೆ.
Discussion about this post