ಬಿಬಿಎಂಪಿಯಲ್ಲಿ ಬಿಜೆಪಿ ಮೇಯರ್ ಪಟ್ಟ ಅಲಂಕರಿಸುತ್ತಿದ್ದಂತೆ ವಾಟಾಳ್ ನಾಗರಾಜ್ ಹಾಗೂ ಕೆಲ ಕನ್ನಡ ಹೋರಾಟಗಾರರು ಎಚ್ಚೆತ್ತುಕೊಂಡಿದ್ದಾರೆ.
ಮೇಯರ್ ಪದವಿಯನ್ನು ಕನ್ನಡಿಗರಿಗೆ ಬಿಟ್ಟುಕೊಡಬೇಕು, ಅನ್ಯ ಭಾಷೆಯ ಮಂದಿಗೆ ಕೊಡಬಾರದು ಎಂದು ಪ್ರತಿಭಟನೆಯನ್ನೂ ಕೂಡಾ ಮಾಡಿದ್ದರು.
ಇನ್ನು ಕೆಲ ಸ್ವಯಂ ಘೋಷಿತ ಹೋರಾಟಗಾರರು ಒಂದು ಹೆಜ್ಜೆ ಮುಂದೆ ಹೋಗಿ ಬಿಬಿಎಂಪಿ ಮೇಯರ್ ಪದವಿಯನ್ನು ಅಲಂಕರಿಸುತ್ತಿರುವ ಗೌತಮ್ ಕುಮಾರ್ ಜೈನ್ ಅಮಿತ್ ಶಾ ಅಭ್ಯರ್ಥಿ. ಬಿಜೆಪಿ ಬೆಂಗಳೂರನ್ನು ಮಾರ್ವಾಡಿಗಳಿಗೆ ಒತ್ತೆ ಇಟ್ಟಿದೆ ಎಂದು ಆರೋಪಿಸಿದ್ದರು.
ಆದರೆ ಇದಕ್ಕೆಲ್ಲಾ ಉತ್ತರಿಸಿರುವ ನೂತನ ಮೇಯರ್ ಗೌತಮ್ ಕುಮಾರ್ ಜೈನ್ ನಾನು ಕನ್ನಡಿಗ, ನಾನು ಹುಟ್ಟಿದ್ದು ಬಳ್ಳಾರಿಯ ಸಿರಗುಪ್ಪದಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ಮೊದಲ ಆದ್ಯತೆ ಕರ್ನಾಟಕ, ಬೆಂಗಳೂರು ಮತ್ತು ಕನ್ನಡಿಗರು ಅಂದಿದ್ದಾರೆ.
Discussion about this post