ಹಣಕಾಸು ಅವ್ಯವಹಾರ ಸಂಬಂಧ ಇಡಿ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
Get Flat 15% off on Hair Removal Cream
ಸತತ ಮೂರು ದಿನಗಳ ವಿಚಾರಣೆ ನಂತರ ಇಡಿ ಬಂಧನಕ್ಕೆ ಒಳಗಾಗಿದ್ದ ಡಿಕೆಶಿ ಇಂದು ಜಾಮೀನು ಅಥವಾ ನ್ಯಾಯಾಂಗ ಬಂಧನದ ನಿರೀಕ್ಷೆಯಲ್ಲಿದ್ದರು.
ಆದರೆ ನ್ಯಾಯಾಲಯ ಡಿಕೆಶಿ ಪರ ವಕೀಲರ ಅರ್ಜಿಯನ್ನು ತಿರಸ್ಕರಿಸಿದ್ದು, ಇಡಿ ಪರ ವಕೀಲರ ಬೇಡಿಕೆಯನ್ನು ಕೋರ್ಟ್ ಪುರಸ್ಕರಿಸಿದೆ.
ಆರೋಪಿ ಡಿಕೆ ಶಿವಕುಮಾರ್ ಅವರನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡುವಂತೆ ವಕೀಲರು ಮನವಿ ಮಾಡಿಕೊಂಡಿದ್ದರು. ಆದರೆ ಇದೀಗ ನ್ಯಾಯಾಧೀಶರು 9 ದಿನಗಳ ಕಾಲ ಡಿಕೆಶಿ ಯವರನ್ನು ಇಡಿ ಕಸ್ಟಡಿಗೆ ನೀಡಿದ್ದಾರೆ.
ಹೀಗಾಗಿ ಇನ್ನು 9 ದಿನಗಳ ಕಾಲ ಬಂಡೆ ಒಡೆಯುವ ಕಾರ್ಯವನ್ನು ಇಡಿ ಅಧಿಕಾರಿಗಳು ಮುಂದುವರಿಸಲಿದ್ದಾರೆ.
ಇದೇ ವೇಳೆ ಖಾಸಗಿ ವೈದ್ಯರನ್ನು ಹೊಂದಲು ಡಿಕೆಶಿಗೆ ನ್ಯಾಯಾಲಯ ಅವಕಾಶ ನೀಡಲಾಗಿದ್ದು, ಪ್ರತೀ ಅರ್ಧ ಗಂಟೆಗೊಮ್ಮೆ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ.
ಇದೇ ವೇಳೆ ಬೆಂಬಲಿಗರಿಗೆ ಸಂದೇಶ ನೀಡಲು ಅವಕಾಶ ಕೊಡುವಂತೆ ಡಿಕೆಶಿ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಆದರೆ ಇದಕ್ಕೆ ನ್ಯಾಯಾಧೀಶರು ಸೊಪ್ಪು ಹಾಕಲಿಲ್ಲ.
ಇನ್ನು ಸೆಪ್ಟಂಬರ್ 13 ರಂದು ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
Discussion about this post