ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುರಿದುಕೊಳ್ಳಲು ತುದಿಕಾಲಿನಲ್ಲಿ ನಿಂತಿದೆ. ಆದರೆ ಯಾರು ಮೈತ್ರಿ ಅಂತ್ಯದ ಕುರಿತಂತೆ ಅಧಿಕೃತವಾಗಿ ಮಾತನಾಡಬೇಕು ಅನ್ನುವುದೇ ಗೊಂದಲ. ದಳಪತಿಗಳು ಕಾಂಗ್ರೆಸ್ ನಾಯಕರ ಮೈತ್ರಿ ಅಂತ್ಯದ ಬಗ್ಗೆ ಮಾತನಾಡುತ್ತಾರೆ ಅಂದುಕೊಂಡಿದ್ದರೆ, ಕಾಂಗ್ರೆಸ್ ನಾಯಕರು ಮೈತ್ರಿ ಮಾಡಿಕೊಂಡಿದ್ದು ರಾಷ್ಟ್ರೀಯ ನಾಯಕರು, ನಾವು ಅದ್ಯಾಕೆ ಮೈತ್ರಿ ಮುರಿದುಕೊಳ್ಳೋಣ, ನಮ್ಮ ಮಾತು,ಸಲಹೆ ಕೇಳದೆ ಸರ್ಕಾರ ರಚಿಸಿದ ನಾಯಕರೇ ಮೈತ್ರಿ ಅಂತ್ಯಗೊಳಿಸಲಿ ಎಂದು ಅವರು ಬಯಸುತ್ತಿದ್ದಾರೆ.
Siddaramaiah considers JD(S) his first enemy, wanted BJP back in power, says Kumaraswamy
ಈ ನಡುವೆ ಮೈತ್ರಿ ಸರ್ಕಾರ ಅಂತ್ಯಗೊಂಡ ಬೆನ್ನಲ್ಲೇ ಫೋನ್ ಕದ್ದಾಲಿಕೆ ಪ್ರಕರಣ ಎರಡೂ ಪಕ್ಷದ ನಡುವೆ ಮತ್ತಷ್ಟು ಬಿರುಕಿಗೆ ಕಾರಣವಾಗಿದೆ. ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಬೇಕಾಗಿದ್ದ ಸಿದ್ದರಾಮಯ್ಯ ಫೋನ್ ಕದ್ದಾಲಿಕೆಯನ್ನು ತನಿಖೆಗೆ ಒಳಪಡಿಸಿ ಅಂದಿದ್ದಾರೆ.
ಇದು ದಳಪತಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಪರೋಕ್ಷವಾಗಿ ಗುಡುಗಿದ್ದಾರೆ.
ಈ ನಡುವೆ ಆಂಗ್ಲ ವೆಬ್ ಸೈಟ್ ಒಂದಕ್ಕೆ ಸಂದರ್ಶನ ಕೊಟ್ಟಿರುವ ಕುಮಾರಸ್ವಾಮಿ, ಸರ್ಕಾರ ಉರುಳಲು ಸಿದ್ದರಾಮಯ್ಯ ಅವರೇ ಕಾರಣ ಅಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಶತ್ರವಾಗಿತ್ತು ಅನ್ನುವ ಮೂಲಕ ಒಲ್ಲದ ಮನಸ್ಸಿನಿಂದ ಸಿದ್ದರಾಮಯ್ಯ ಮೈತ್ರಿ ಸರ್ಕಾರ ರಚನೆಗೆ ಒಪ್ಪಿಕೊಂಡಿದ್ದರು ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಹಾಗೇ ನೋಡಿದರೆ ಕುಮಾರಸ್ವಾಮಿ ಹೇಳಿದ ಮಾತಿನಲ್ಲಿ ಸತ್ಯವಿದೆ. ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಕಾಂಗ್ರೆಸ್ ನಾಯಕರಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಇಷ್ಟವಿರಲಿಲ್ಲ. ಆದರೂ ಕೈ ರಾಷ್ಟ್ರೀಯ ನಾಯಕರ ಕಾರಣದಿಂದ ಕಾಂಗ್ರೆಸ್ ಬಲಿಪಶುವಾಯ್ತು.
Discussion about this post