ಜೆಡಿಎಸ್ ಪಕ್ಷದಿಂದ ಅಮಾನತು ಮತ್ತು ಶಾಸಕ ಸ್ಥಾನದಿಂದ ಅನರ್ಹಗೊಂಡ ಬಳಿಕ ವಕೀಲರನ್ನು ಭೇಟಿಯಾಗುವ ಸಲುವಾಗಿ ಬುಧವಾರ ರಾತ್ರಿ ದೆಹಲಿಗೆ ತಲುಪಿದ್ದ ವಿಶ್ವನಾಥ್ ಗುರುವಾರ ಕರ್ನಾಟಕ ಭವನಕ್ಕೆ ತೆರಳಿದ್ದರು. ಈ ವೇಳೆ ಎದುರಾದ ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿಯರು ಯಾಕೆ ಸರ್ ಕಾಂಗ್ರೆಸ್ ಅನ್ನು ತೊರೆದ್ರಿ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ವಿಶ್ವನಾಥ್ ‘ಸೂ’ ಶಬ್ಧ ಬಳಕೆ ಮಾಡಿದ್ದಾರೆ. ಕಾಂಗ್ರೆಸ್ ಸರಿಯಾಗಿದೆ, ಆದರೆ ಆಯೋಗ್ಯ ನಾಯಕರು ತುಂಬಿದ್ದಾರೆ ಎಂದು ಟೀಕಿಸುವ ಭರದಲ್ಲಿ ಈ ಶಬ್ಧ ಪ್ರಯೋಗಿಸಿದ್ದಾರೆ.
Discussion about this post