ಚುನಾವಣೆಯಲ್ಲಿ ಸೋಲುಂಡು ಮಾಜಿ ಆಗಿರುವ ಲಕ್ಷ್ಮಣ ಸವದಿ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಹಾಗಾದರೆ ಎಲ್ಲಾ ನಾಯಕರನ್ನು ಹಿಂದೆ ಹಾಕಿ ಸವದಿ ಸ್ಥಾನ ಗಿಟ್ಟಿಸಿಕೊಂಡಿದ್ದು ಹೇಗೆ ಅನ್ನುವುದೇ ಯಕ್ಷ ಪ್ರಶ್ನೆ.
ಆದರೆ ಸವದಿಯವರನ್ನು ಸಚಿವರನ್ನಾಗಿಸಿರುವುದರ ಹಿಂದೆ ಯಡಿಯೂರಪ್ಪ ಹಾಗೂ ರಮೇಶ್ ಜಾರಕಿಹೊಳಿಯವರ ಮಾಸ್ಟರ್ ಪ್ಲಾನ್ ಅಡಗಿದೆ ಎನ್ನಲಾಗಿದೆ.
ಮುಂಬರುವ ಉಪ ಚುನಾವಣೆಯಲ್ಲಿ ಬಿಜೆಪಿ 7 ರಿಂದ 8 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಹೀಗಾಗಿ ಗೆಲ್ಲಬಹುದಾದ ಕ್ಷೇತ್ರಗಳೆಂದು ಗುರುತಿಸಿಕೊಂಡಿರುವ ಅಥಣಿ ಮತ್ತು ಕಾಗವಾಡದಲ್ಲಿ ಲಕ್ಷ್ಮಣ ಸವದಿಯವರಿಗೆ ಸಾಕಷ್ಟು ಮತಗಳಿದೆ.
ಜೊತೆಗೆ ಲಕ್ಷ್ಮಣ ಸವದಿ ಉತ್ತಮ ಸಂಘಟಕಾರ. ಮತದಾರರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಈ ಭಾಗದಲ್ಲಿರುವ ಸಹಕಾರಿ ಕ್ಷೇತ್ರದಲ್ಲಿ ಸವದಿಯವರಿಗೆ ಒಳ್ಳೆಯ ಹೆಸರಿದೆ.
ಹೀಗಾಗಿ ಮಹೇಶ್ ಕುಮ್ಮಟಳ್ಳಿ ಬದಲಿಗೆ ಸವದಿಯವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸುವುದು ಯೋಜನೆಯಾಗಿದೆ. ಉಪಚುನಾವಣೆಯಲ್ಲಿ ಸವದಿ ಗೆದ್ದ ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ. ನಂತರ ರಮೇಶ್ ಜಾರಕಿಹೊಳಿ ಸಚಿವರಾಗ್ತಾರೆ ಅನ್ನುವುದು ರಾಜಕೀಯ ಪಡಸಾಲೆಯ ಸುದ್ದಿ.
Discussion about this post