ಹಿರಿಯ ರಾಜಕಾರಣಿ ತುಮಕೂರಿನ ಚಿಕ್ಕನಾಯಕನಹಳ್ಳಿಯ ಶಾಸಕ ಮಾಧುಸ್ವಾಮಿ ಮಂಗಳವಾರ ಬೆಳಗ್ಗೆ
ರಾಜ್ಯದ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಪ್ರಮಾಣ ವಚನ ಸ್ವೀಕರಿಸುವ
ವೇಳೆ ಬಾಯ್ತಪ್ಪಿ ಅವರು ಮಂತ್ರಿಯಾಗಿ ಅನ್ನುವ ಬದಲು ಮುಖ್ಯಮಂತ್ರಿಯಾಗಿ ಎಂದು ಹೇಳಿದರು. ಬಳಿಕ ತಕ್ಷಣವೇ ಅವರು ಮಂತ್ರಿಯಾಗಿ
ಎಂದೂ ಸರಿಪಡಿಸಿಕೊಂಡು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಸದನದ ಹೊರಗೆ ಮತ್ತು ಒಳಗೆ ಸಿಎಂ ಯಡಿಯೂರಪ್ಪ ಅವರ ಪಾಲಿಗೆ ಆಪತ್ಬಾಂಧವ ಎಂದೇ ಗುರುತಿಸಿಕೊಂಡವರು ಮಾಧುಸ್ವಾಮಿ. ಅಂದಿನ ಸಿಎಂ ಎಚ್ಡಿ ಕುಮಾರಸ್ವಾಮಿ ಆಪರೇಷನ್ ಆಡಿಯೋ ಬಾಂಬ್ ಸಿಡಿಸಿದ್ದಾಗ ಬಿಎಸ್ ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದರು. ಹೀಗಾಗಿ ನಿರೀಕ್ಷೆಯಂತೆ ಮಾಧುಸ್ವಾಮಿ ಅವರಿಗೆ ಮಂತ್ರಿಸ್ಥಾನ ಲಭಿಸಿದೆ. ಈ ಮೂಲಕ ಯಡಿಯೂರಪ್ಪ ಅವರ ಆಪ್ತವಲಯವನ್ನು ಹೈಕಮಾಂಡ್ ಕಡೆಗಣಿಸಿಲ್ಲ ಎಂಬುದು ರುಜುವಾತಾದಂತಾಗಿದೆ.
Discussion about this post