ಕಚೇರಿ ಸಮಯದಲ್ಲಿ ಇಸ್ಪೀಟ್ ಆಡುತ್ತಾ, ಮದ್ಯಪಾನ ಮಾಡಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿದ್ದು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಆದೇಶಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ ನಿಯೋಜನೆ ಮೇರೆಗೆ ಬಿಡಿಎ ಇಂಜಿನಿಯರಿಂಗ್ ವಿಭಾಗಕ್ಕೆ ಬಂದಿದ್ದ ಎಂ.ಎಸ್. ಶಂಕರಮೂರ್ತಿ, ಡಿ.ಎಂ. ನಾರಾಯಣ ಮೂರ್ತಿ ಹಾಗೂ ಜೆ. ಮುರಳೀಧರ್ ಅಮಾನತುಗೊಂಡ ಅಧಿಕಾರಿಗಳು. ಮೊದಲ ಇಬ್ಬರು ಅಧಿಕಾರಿಗಳು ಸಹಾಯಕ ಎಂಜಿನಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಮುರಳೀಧರ್ ಆಕೃತಿ ರಚನೆಕಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬಿಡಿಎಂ ನಂ4ನೇ ಉತ್ತರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರ ಮೋಜು ಮಸ್ತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಇದು ಆಯುಕ್ತರ ಗಮನಕ್ಕೆ ಬಂದ ತಕ್ಷಣ ಸೇವೆಯಿಂದ ಅಮಾನತುಗೊಳಿಸಲಾಗಿದೆ.
Discussion about this post