ಉದ್ಯಮಿ, ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ಧಾರ್ಥ್ ಅವರು ನಿಗೂಢವಾಗಿ ಕಾಣೆಯಾದ ಬೆನ್ನಲ್ಲೇ , ಸಿದ್ದಾರ್ಥ್ ಬರೆದಿದ್ದಾರೆ ಎನ್ನಲಾದ ಕೊನೆಯ ಪತ್ರವೊಂದು ಇದೀಗ ಬಹಿರಂಗವಾಗಿದೆ.
ಜುಲೈ 27 ರಂದು ಅಂದ್ರೆ, ತಾವು ನಾಪತ್ತೆಯಾಗುವ ಮೂರು ದಿನಕ್ಕೂ ಮುನ್ನ ಅವರು ಈ ಪತ್ರವನ್ನು ಬರೆದಿದ್ದಾರೆ.
ಪತ್ರದ ಸಾರಾಂಶಗಳನ್ನು ಗಮನಿಸುತ್ತಾ ಹೋದ್ರೆ
ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ಬರುತ್ತಿದೆ.
ಆದಾಯ ತೆರಿಗೆ ಇಲಾಖೆಯ ಈ ಹಿಂದಿನ ಮುಖ್ಯಸ್ಥರ
ಕಿರುಕುಳ, ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದವರ ಒತ್ತಡ ಹೀಗೆ ನಾನಾ ವಿಚಾರಗಳನ್ನು ಪತ್ರದಲ್ಲಿ
ಪ್ರಸ್ತಾಪಿಸಿರುವ ಸಿದ್ದಾರ್ಥ್, ಉದ್ಯೋಗಿಗಳ ಕ್ಷಮೆ ಕೇಳಿದ್ದಾರೆ.
ಜೊತೆಗೆ ಹೊಸ ಆಡಳಿತ ಮಂಡಳಿ ರಚಿಸಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಿ, ತಮ್ಮಲ್ಲಿರುವ ಆಸ್ತಿಯ ಮೊತ್ತ ಸಾಲಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಎಲ್ಲಾ ಸಾಲವನ್ನು ತೀರಿಸುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ.
Discussion about this post