ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಕೇರಳದ ಅರುಣಿ ಟಿಕ್ ಟಾಕ್ ಮೂಲಕ ಸಾಕಷ್ಟು ಸದ್ದು ಮಾಡಿದ್ದಳು. ಅಪಾರ ಅಭಿಮಾನಿ ಬಳಗ ಹೊಂದಿದ್ದ ಅರುಣಿ ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಶುಕ್ರವಾರ ಕೇರಳ ಖಾಸಗಿ ಆಸ್ಪತ್ರೆ ನಿಧನ ಹೊಂದಿದ್ದಾಳೆ.
9 ವರ್ಷದ ಅರುಣಿ ತನ್ನ ಕಣ್ಸನೆ ಮತ್ತು ಮುಖ ಭಾವದ ಮೂಲಕ ಸಾವಿರಾರು ಹೃದಯಗಳನ್ನು ಗೆದ್ದಿದ್ದಳು. ಹಳೆಯ ಮಲಯಾಳಂ ಚಲನಚಿತ್ರದ ಡೈಲಾಗ್ ಗಳಿಗೆ ಟಿಕ್ ಟಾಕ್ ಮೂಲ ಜೀವ ತುಂಬುತ್ತಿದ್ದ ಅರುಣಿಗೆ ಸಾವು ಗೆಲ್ಲಲು ಸಾಧ್ಯವೇ ಆಗಲಿಲ್ಲ.
Buy Running Shoes for Mens starting from Rs.1749
ಅರುಣಿಗೆ ಸ್ವೈನ್ ಫ್ಲೂ ಕಾಡಿತ್ತು ಎಂದು The NEWS Minute ವರದಿ ಮಾಡಿದ್ದು, ತಿರುವನಂತಪುರದ SIT ಆಸ್ಪತ್ರೆಗೆ ಎರಡು ದಿನಗಳ ಹಿಂದೆ ದಾಖಲಿಸಲಾಗಿತ್ತು.
ಕೊಲ್ಲಂ ಕಣ್ಣಲ್ಲೂರ್ ನಲ್ಲಿ ವಾಸಿಸುತ್ತಿದ್ದ ಅರುಣಿ ಶ್ರೀ ಶ್ರೀ ಅಕಾಡೆಮಿಯಲ್ಲಿ ವ್ಯಾಸಂಗ ನಡೆಸುತ್ತಿದ್ದಳು. ಎರಡು ದಿನಗಳ ಹಿಂದೆ ಜ್ವರ ಮತ್ತು ತೀವ್ರ ತಲೆನೋವು ಕಾಣಿಸಿಕೊಂಡ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇಹ ಪರಿಸ್ಥಿತಿ ವಿಷಮಗೊಂಡ ಕಾರಣ ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ವಿಧಿ ಬರಹ ಅಂದ್ರೆ ಅರುಣಿ ಕಳೆದ ವರ್ಷವಷ್ಟೇ ತನ್ನ ತಂದೆಯನ್ನು ಅಪಘಾತವೊಂದರಲ್ಲಿ ಕಳೆದುಕೊಂಡಿದ್ದಳು. ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅರುಣಿ ತಂದೆ ನಿಧನ ಹೊಂದಿದ್ದರು.
ಇದೀಗ ಅರುಣಿ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣೀರ ಕೋಡಿ ಹರಿಯುತ್ತಿದೆ. ವಿಧಿಯೆಷ್ಟು ಕ್ರೂರ ಅಲ್ವಾ..?
Discussion about this post