ಆದರೆ ಇದೇ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಜಿ. ಪರಮೇಶ್ವರ್ ಅವರ ಝಿರೋ ಟ್ರಾಫಿಕ್ ಪ್ರೀತಿಯಿಂದ ಆಗಿರುವ ತೊಂದರೆಗಳು ಮಾನ್ಯ ಸ್ಪೀಕರ್ ರಮೇಶ್ ಕುಮಾರ್ ಅವರ ಗಮನಕ್ಕೆ ಬಂದಿಲ್ಲ ಅನ್ನಿಸುತ್ತದೆ. ಅತೃಪ್ತ ಶಾಸಕರು ಝಿರೋ ಟ್ರಾಫಿಕ್ ನಲ್ಲಿ ಬಂದಿರುವುದನ್ನು ದೇಶವೇ ನೋಡಿದೆಯಂತೆ. ಆದರೆ ಪರಮೇಶ್ವರ್ ಝಿರೋ ಟ್ರಾಫಿಕ್ ಪ್ರೀತಿಯಿಂದ ಶಾಲಾ ಮಕ್ಕಳು ತೊಂದರೆ ಅನುಭವಿಸಿದ್ದನ್ನು ರಮೇಶ್ ಕುಮಾರ್ ಅವರು ನೋಡಿದ ಹಾಗಿಲ್ಲ.
ಝಿರೋ ಟ್ರಾಫಿಕ್ ಟ್ರಾಫಿಕ್ ಯಾರಿಗೆ ಕೊಡ್ತಾರೆ ಅನ್ನುವುದನ್ನು ಮಾನ್ಯ ರಮೇಶ್ ಕುಮಾರ್ ವಿವರಿಸಿದ್ದಾರೆ. ಅದನ್ನು ಈ ವಿಡಿಯೋದಲ್ಲಿ ನೋಡಬಹುದು.
ಹಾಗಿದ್ದ ಮೇಲೆ ಬೆಂಗಳೂರು ಉಸ್ತುವಾರಿ ಮತ್ತು ಉಪಮುಖ್ಯಮಂತ್ರಿ ಹುದ್ದೆಯನ್ನು ವಹಿಸಿರುವ ಪರಮೇಶ್ವರ್ ಅವರಿಗೆ ಅಂತಹ ತುರ್ತು ಕೆಲಸ ಏನಿದೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ತುರ್ತು ಕಾರ್ಯಗಳು ಕೆಲವೊಮ್ಮೆ ಇರುತ್ತದೆ ( ಎಲ್ಲಾ ಅವಧಿಯಲ್ಲೂ ಅಲ್ಲ, ಅಥವಾ ಭದ್ರತೆಯ ಕಾರಣವೂ ಇರಬಹುದು )
ಅತೃಪ್ತರಿಗೆ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯಪಾಲರು ಸೂಚಿಸಿದ ಕಾರಣಕ್ಕೆ ನಗರ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಹಾಗಂತ ಪರಮೇಶ್ವರ್ ಅವರಿಗೆ ಅದ್ಯಾವ ಕಾರಣಕ್ಕೆ ಝಿರೋ ಟ್ರಾಫಿಕ್ ನೀಡಲಾಗಿದೆ ಅನ್ನುವುದೇ ಯಕ್ಷ ಪ್ರಶ್ನೆ. ಮಾನ್ಯ ಉಪಮುಖ್ಯಮಂತ್ರಿಗಳಿಗೆ ಝಿರೋ ಟ್ರಾಫಿಕ್ ವ್ಯವಸ್ಥೆ ನೀಡಲು ಸಾಧ್ಯ ಅನ್ನುವುದಾದರೆ ಅತೃಪ್ತ ಶಾಸಕರಿಗೆ ಕೊಡುವುದರಲ್ಲಿ ತಪ್ಪೇನಿದೆ.
Discussion about this post