ಅತೃಪ್ತ ಶಾಸಕರು ಮುಂಬೈನಿಂದ ಬೆಂಗಳೂರಿಗೆ ಬಂದಾಗ ಝಿರೋ ಟ್ರಾಫಿಕ್ ವ್ಯವಸ್ಥೆ ಒದಗಿಸಿದ ಬಗ್ಗೆ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಕೆಂಡಾಮಂಡಲವಾದ ಪ್ರಸಂಗ ವಿಧಾನಸಭೆಯಲ್ಲಿ ಸೋಮವಾರ ನಡೆಯಿತು.
ಈ ವೇಳೆ ಕೆಂಡಾಮಂಡಲರಾದ ಸ್ಪೀಕರ್ ರಮೇಶ್ ಕುಮಾರ್, ಅಪರಾಧಿಗಳಿಗೆ ಝೀರೋ ಟ್ರಾಫಿಕ್ ಕೊಡಿ, ಹೇಗೆ ನಡಿಸ್ತೀರಿ ಈ ಸಮಾಜನ ಮುಂದಕ್ಕೆ ಎಂದು ಗೃಹ ಸಚಿವ ಎಂಬಿ ಪಾಟೀಲ್ ಅವರನ್ನು ಪ್ರಶ್ನಿಸಿದರು.
ಸದನದಲ್ಲಿ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಸ್ಪೀಕರ್ ಕೂಡ ಸಹಮತ ವ್ಯಕ್ತಪಡಿಸಿ, ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ವಿರುದ್ಧ ಗರಂ ಆದರು.
Get upto 60% off on Headphone & Speakers
ಝಿರೋ ಟ್ರಾಫಿಕ್ ವ್ಯವಸ್ಥೆ ಒದಗಿಸಲು ನಿಮಗೆ ಯಾರು ಆದೇಶ ನೀಡಿದರು ಎಂಬುದನ್ನು ತಿಳಿಸಿ ಎಂದು ರಮೇಶ್ ಕುಮಾರ್ ಗೃಹ ಸಚಿವರನ್ನು ಪ್ರಶ್ನಿಸಿದರು.
ಮುಂಬೈನಿಂದ ಸ್ಪೀಕರ್ ಅವರ ಮುಂದೆ ಹಾಜರಾಗಲು ಬಂದ ಅತೃಪ್ತ ಶಾಸಕರಿಗೆ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿಲ್ಲ ಅಂದರು. ಇದರಿಂದ ವಿಧಾನಸಭಾಧ್ಯಕ್ಷರು ಮತ್ತಷ್ಟು ಕುಪಿತರಾದರು.
Redmi 7 Smartphone ಮೊಬೈಲ್ 7999 ರೂಪಾಯಿಗೆ ಅಂದ್ರೆ ನಂಬ್ತೀರಾ…?
ಈ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್, ನೀವು ಹೇಳಿದ ಉತ್ತರ ನಿಮಗೇ ಸರಿ ಕಾಣುತ್ತಿದೆಯೇ? ರಾಜಕಾರಣಿಯಾಗಿ ನೀವು ಮಾತನಾಡುತ್ತಿದ್ದೀರಲ್ಲ. ಅವರಿಗೆ ಝೀರೋ ಟ್ರಾಫಿಕ್ ಮಾಡಿಕೊಟ್ಟಿರುವುದನ್ನು ಇಡೀ ದೇಶವೇ ನೋಡಿದೆ. ನಿಮ್ಮ ಹೇಳಿಕೆ ಸತ್ಯ ಎಂದು ನೀವು ಒಪ್ಪುತ್ತೀರಾ ಎಂದು ಗದರಿದರು.
ಇನ್ನು ಸ್ಪೀಕರ್ ಗರಂ ಆಗುತ್ತಿದ್ದಂತೆ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ವರದಿ ನೀಡುವುದಾಗಿ ಹೇಳಿದ ಗೃಹ ಸಚಿವರು ರಮೇಶ್ ಕುಮಾರ್ ಅವರನ್ನು ಶಾಂತಗೊಳಿಸಲು ಯತ್ನಿಸಿದರು.
ಇದರ ಬೆನ್ನಲ್ಲೇ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಮಿಷನರ್ ಅಲೋಕ್ ಕುಮಾರ್ ಅವರಿಂದ ಖುದ್ದು ವಿವರಣೆ ಪಡೆಯಲು ಎಂಬಿ ಪಾಟೀಲ್ ನಿರ್ಧರಿಸಿದರು. ಅಲೋಕ್ ಕುಮಾರ್ ಅವರನ್ನು ವಿಧಾನಸೌಧಕ್ಕೆ ಕರೆಸಿದರು. ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಲು ಬಂದ ಸಂದರ್ಭದಲ್ಲಿ ರೆಬೆಲ್ ಎಂಎಲ್ಎಗಳಿಗೆ ಝೀರೋ ಟ್ರಾಫಿಕ್ ನೀಡಲಾಗಿರುವ ಕುರಿತು ಅಲೋಕ್ ಕುಮಾರ್ ಅವರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು.
ನಗರ ಆಯುಕ್ತರು ಕೊಟ್ಟಿರುವ ವರದಿಯ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.
Discussion about this post