ನಗದು ವರ್ಗಾವಣೆಗೆ ಡಿಜಿಟಲ್ ಮಾರ್ಗ ಬಳಸುವಂತೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತಲೇ ಇದೆ. ಆದರೆ ಬ್ಯಾಂಕ್ ಗಲು ವಿಧಿಸುತ್ತಿರುವ ದುಬಾರಿ ಶುಲ್ಕದ ಕಾರಣದಿಂದ ಜನ ಡಿಜಿಟಲ್ ಕಡೆ ತೋರಿದ ಒಲವಿನಿಂದ ಹಿಂದೆ ಸರಿದಿದ್ದರು.
ಅದರಲ್ಲೂ RTGS ಮತ್ತು NEFT ವರ್ಗಾವಣೆಗೆ ಬ್ಯಾಂಕ್ ಗಳು ಎನ್ಇಎಫ್ಟಿಗೆ 1 ರಿಂದ 5 ರೂ. ಮತ್ತು ಆರ್ಟಿಜಿಎಸ್ಗೆ 5 ರಿಂದ 50 ರೂ.ವರೆಗೆ ಶುಲ್ಕವನ್ನು ವಿಧಿಸುತ್ತಿತ್ತು.
ಇದೀಗ ಜನರ ಮನಸ್ಥಿತಿಯನ್ನು ಅರಿತುಕೊಂಡಿರುವ RBI, RTGS ಮತ್ತು NEFT ವರ್ಗಾವಣೆ ಮಾಡುವವರಿಗೆ ಸಿಹಿ ಸುದ್ದಿ ಕೊಟ್ಟಿದೆ.
ಆರ್ಟಿಜಿಎಸ್ ಮತ್ತು ಎನ್ಇಎಫಿಗಳ ಮೇಲೆ ಜು.1ರಿಂದ ಯಾವುದೇ ಶುಲ್ಕಗಳನ್ನು ವಿಧಿಸದಿರಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದ್ದು, ಇದರ ಲಾಭವನ್ನು ಆ ದಿನದಿಂದಲೇ ಗ್ರಾಹಕರಿಗೆ ವರ್ಗಾಯಿಸುವಂತೆ ಎಲ್ಲ ಬ್ಯಾಂಕ್ಗಳಿಗೂ ಸೂಚಿಸಿದೆ.
ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನಗಳಾದ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿಗಳ ಶುಲ್ಕಗಳನ್ನು ವಜಾಗೊಳಿಸುವ ಮೂಲಕ ಡಿಜಿಟಲ್ ವಹಿವಾಟನ್ನು ಉತ್ತೇಜಿಸುವುದು ಆರ್ಬಿಐನ ಉದ್ದೇಶ.
Discussion about this post