ಬೆಳ್ತಂಗಡಿ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಹರೀಶ್ ಪೂಂಜಾ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕಳೆದ ಬಾರಿ ಕರಾವಳಿಯಲ್ಲಿ ಜಲಪ್ರಳಯ ಸಂಭವಿಸಿದ ಸಂದರ್ಭದಲ್ಲಿ ಪೂಂಜಾ ಅವರು ಹಗಲು ರಾತ್ರಿ ಎನ್ನದೇ ಓಡಾಡಿ ಜನ ಮೆಚ್ಚುಗೆ ಪಡೆದಿದ್ದರು.
ಆ ನಂತ್ರ ಮೋದಿ ಮಂಗಳೂರು ಭೇಟಿ ಸಂದರ್ಭದಲ್ಲಿ ಚೌಕಿದಾರ್ ವೇಷ ತೊಟ್ಟು ವೈರಲ್ ಆಗಿದ್ದರು. ಇದೀಗ ಮತ್ತೊಂದು ಕಾರಣಕ್ಕೆ ಶಾಸಕರು ವೈರಲ್ ಆಗಿದ್ದಾರೆ.
ಪತ್ನಿ ತುಂಬು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಮಂಗಳೂರು ಬೆಂಗಳೂರು ಎಂದು ಓಡಾಡಿಕೊಂಡಿದ್ದ ಹರೀಶ್ ಪೂಂಜಾ ಕರಾವಳಿಯಲ್ಲಿ ಹದಗೆಡುತ್ತಿರುವ ಶಾಂತಿ ಸುವ್ಯವಸ್ಥೆ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಕೊಟ್ಟಿದ್ದರು.
ಮತ್ತೊಂದು ಕಡೆ ಪತ್ನಿಗೆ ಖಾಸಗಿ ಆಸ್ಪತ್ರೆಯಲ್ಲಿ ಎರಡನೇ ಗಂಡು ಮಗುವಿಗೆ ಜನ್ಮ ಕೊಡುತ್ತಿದ್ದಂತೆ ಅವರ ಕ್ಷೇತ್ರದಲ್ಲಿ ಅಕ್ರಮ ಗೋಸಾಗಟ ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರ ಬಂಧನದ ಸುದ್ದಿ ಬಂದಿತ್ತು. ತಡರಾತ್ರಿ ಕಾರ್ಯಕರ್ತರ ರಕ್ಷಣೆಗೆ ಉಪ್ಪಿನಂಗಡಿ ಠಾಣೆಗೆ ಧಾವಿಸಿದ ಶಾಸಕರು ಪ್ರತಿಭಟನೆ ಕೂಡಾ ನಡೆಸಿದರು.
Get upto 40% off + Extra 20% off on Womens Clothing
ಇದು ಕಾರ್ಯಕರ್ತರಿಗೆ ಸಖತ್ ಖುಷಿ ಕೊಟ್ಟಿದ್ದು, ಪತ್ನಿ ಮಗುವಿಗೆ ಜನ್ಮ ನೀಡಿದ ಸಂಧರ್ಭದಲ್ಲೂ ಹರೀಶ್ ಪೂಂಜರ ಕರ್ತವ್ಯ ಪ್ರಜ್ಞೆಗೆ ಧನ್ಯವಾದ ಅಂದಿದ್ದಾರೆ.
Discussion about this post