ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಐಪಿಎಸ್ ಹುದ್ದೆ ತೊರೆದ ನಂತ್ರ ಏನು ಮಾಡುತ್ತಿದ್ದಾರೆ ಅನ್ನುವ ಕುತೂಹಲ ಎಲ್ಲರಲ್ಲಿತ್ತು.
ಅವರೇ ಹೇಳಿದಂತೆ ಒಂದಿಷ್ಟು ದಿನ ಕುಟುಂಬಸ್ಥರ ಜೊತೆ ಕಾಲ ಕಳೆಯಲು ತೀರ್ಮಾನಿಸಿರುವ ಅವರು ನಂತ್ರ ಹಿಮಾಲಯ ಕಡೆ ಟ್ರಕ್ಕಿಂಗ್ ಹೋಗುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಈ ನಡುವೆ ಅದ್ಯಾವುದೋ ಒಳ್ಳೆಯ ಕಾರ್ಯಕ್ಕೆ ಇಳಿಯಲು ನಿರ್ಧರಿಸಿರುವ ಅಣ್ಣಾಮಲೈ ಇದೀಗ ತೀರ್ಥಯಾತ್ರೆ ಪ್ರಾರಂಭಿಸಿದ್ದಾರೆ.
ಈ ಸಾಲಿನಲ್ಲಿ ಮೊದಲಿಗೆ ಅವರು ಕಾಣಿಸಿಕೊಂಡಿದ್ದು ಹರಿಹರ ಸುತನ ಸನ್ನಿಧಿ ಶಬರಿಮಲೆಯಲ್ಲಿ. ಐಪಿಎಸ್ ಅಧಿಕಾರಿಯಾಗಿದ್ದೆ ಅನ್ನುವ ಹಮ್ಮು ಬಿಮ್ಮು ಬಿಟ್ಟು ಏಕಾಂಗಿಯಾಗಿ ಬೆಟ್ಟ ಹತ್ತಿದ್ದ ಅಣ್ಣಾಮಲೈ ಅವರನ್ನು ಕೆಲ ಭಕ್ತರು ಗುರುತಿಸಿದ್ದಾರೆ. ಹೀಗಾಗಿ ಮಾತನಾಡಿಸಿ, ಶುಭ ಹಾರೈಸಿ ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ.
Discussion about this post