ನಮ್ಮ ಕೈ ಬೆರಳುಗಳು ಒಂದೇ ರೀತಿ ಇಲ್ಲ ಅನ್ನುವಂತೆ ವ್ಯವಸ್ಥೆಯಲ್ಲೂ ಕೂಡಾ ಲೋಪ ದೋಷ ಸಹಜ ಅನ್ನುವಂತಾಗಿದೆ. ಅದರಲ್ಲೂ ಪೊಲೀಸ್ ಇಲಾಖೆ ಜನರಿಗೆ ಎಷ್ಟು ಅಗತ್ಯವೋ, ಅಷ್ಟೇ ಆಕ್ರೋಶವೂ ಇದೆ.
ವ್ಯವಸ್ಥೆಯ ಲೋಪದ ಕಾರಣಕ್ಕೆ ಖಾಕಿಗಳನ್ನು ಕಂಡ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಪೊಲೀಸರು ಅಂದ್ರೆ ಜನರಿಗೆ ಕಣ್ಮುಂದೆ ಬರೋದು ಡೊಳ್ಳು ಹೊಟ್ಟೆ. ಇನ್ನು ಲಂಚದ ಕಾರಣಕ್ಕೆ ಪೊಲೀಸ್ ಇಲಾಖೆ ಸಾಕಷ್ಟು ಸುದ್ದಿಯಾಗುತ್ತದೆ. ಕಾಸಿದ್ದರೆ ಖಾಕಿ ಇಲಾಖೆಯಲ್ಲಿ ಏನು ಬೇಕಾದರೂ ನಡೆಯುತ್ತದೆ ಅನ್ನುವುದಕ್ಕೆ ಸಾವಿರ ಉದಾಹರಣೆಗಳಿವೆ.
ಪತ್ರಿಕೆಗಳಲ್ಲಿ ಪ್ರಕಟವಾಗುವ ಪೋಲೀಸರ ಕುರಿತಾದ ಕಾರ್ಟೋನ್ ಗಳನ್ನು ನೋಡಿ ಶಿಸ್ತಿನ ಶಿಪಾಯಿಯಂತಿರಬೇಕಾದ ಇಲಾಖೆ ಅದೆಷ್ಟು ಟೀಕೆಗೆ ಒಳಗಾಗುತ್ತದೆ ಎಂದು ಅರಿವಾಗುತ್ತದೆ.
ಹಾಗಾದರೆ ಪೊಲೀಸ್ ಇಲಾಖೆಯಲ್ಲಿ ಇರುವವರೆಲ್ಲ ಕೆಟ್ಟವರೇ, ಖಂಡಿತಾ ಅಲ್ಲ ದೊಡ್ಡ ಪ್ರಮಾಣದ ಹಾಲಿಗೆ ಸಣ್ಣ ಪ್ರಮಾಣದ ಹುಳಿ ಹಿಂಡಿದರೆ ಏನಾಗುತ್ತದೆ ಹೇಳಿ, ಹಾಗೇ ಪೊಲೀಸ್ ಇಲಾಖೆ ಕಥೆಯಾಗಿದೆ.
ಹಾಗಾದರೆ ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ, ಬೆಂಗಳೂರಿನ ಠಾಣೆಯೊಂದರಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವವರೊಬ್ಬರು ಜನ ಮೆಚ್ಚುವ, ಇಲಾಖೆ ಸಿಬ್ಬಂದಿ ಫಾಲೋ ಮಾಡಬೇಕಾದ ಕಾರ್ಯವೊಂದನ್ನು ಮಾಡಿದ್ದಾರೆ.
ಇವರ ಹೆಸರು ಸತ್ಯ ಹಿರಿಯಬ್ಬೆ, ಠಾಣೆಯೊಂದರ ಮುಖ್ಯಸ್ಥರು. ಕೆಲಸದ ಒತ್ತಡ ಮತ್ತು ಲೈಫ್ ಸ್ಟೈಲ್ ಕಾರಣದಿಂದ ದೇಹ ದಪ್ಪವಾಗಿತ್ತು. ( ಪೊಲೀಸ್ ದಪ್ಪವಾಗಿದ್ದಾರೆ ಅಂದ್ರೆ ಜನ ಅಂದುಕೊಳ್ಳುವುದೇ ಬೇರೆ,)
ಸಾಹಿತ್ಯ ಸಂಸ್ಕೃತಿ. ಪ್ರಕೃತಿ ಪರಿಸರ ಹೀಗೆ ಸಾಮಾಜಿಕ ಕಾಳಜಿ ಹೊಂದಿದ್ದ ಸತ್ಯ ಅವರಿಗೆ ತಾನು ದಪ್ಪವಾಗುತ್ತಿದ್ದೇನೆ ಅನ್ನುವುದು ಕಿರಿ ಕಿರಿ ಉಂಟು ಮಾಡಿತ್ತು. ಹೀಗಾಗಿ ತಾನು ಮತ್ತೆ ಹಳೆಯ ಸ್ವರೂಪಕ್ಕೆ ಹಿಂತಿರುಗಲೇಬೇಕು, ಫಿಟ್ ಅಂಡ್ ಫೈನ್ ಆಗಲೇಬೇಕು ಎಂದು ಫೆಬ್ರವರಿ 20 ರಂದು ನಿರ್ಧರಿಸಿದರು.
ಇದೀಗ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿರುವ ಸತ್ಯ ಅವರು ಜೂನ್ ಹೊತ್ತಿಗೆ 18 ಕೆಜಿ ತೂಕ ಕಳೆದುಕೊಂಡಿದ್ದಾರೆ.
ಮೈ ಕಟ್ಟು ನೋಡಿದ್ರೆ ರೀಲ್ ಮೇಲೆ ಕಾಣಿಸಿಕೊಳ್ಳುವ ಪೊಲೀಸ್ ಅಧಿಕಾರಿಯಂತೆ ಕಾಣುತ್ತಿದ್ದಾರೆ. ಖಾಕಿ ಅಂದ್ರೆ ರಫ್ ಅಂಡ್ ಟಫ್ ಇರಬೇಕು ಅಂತೀವಲ್ಲ ಹಾಗಾಗಿದ್ದಾರೆ.
ಸತ್ಯ ಹಿರಿಯಬ್ಬೆ ಅವರು ಮಾಡಿರುವ ಸಾಧನೆಯನ್ನು ಮೆಚ್ಚಲೇಬೇಕು. ಕಾರ್ಯದ ಒತ್ತಡ ಲೈಫ್ ಸ್ಟೈಲ್ ಕಾರಣದಿಂದ ದೇಹ ಬೆಳೆಸಿಕೊಂಡವರು ದೇಹ ಕರಗಿಸುವುದನ್ನ ಇವರಿಂದ ಕಲಿಯಲೇಬೇಕು
ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸತ್ಯ ಅವರು , ತಾನು ಹೇಗೆ ಫಿಟ್ ಅದೆ ಅನ್ನೋದನ್ನ ವಿವರಿಸಿದ್ದಾರೆ.
ನಿತ್ಯ 7 ರಿಂದ 8 km ವಾಕಿಂಗ್ ಮತ್ತು ಜಾಗಿಂಗ್ ಜೊತೆಗೆ ಸಿಂಪಲ್ ಯೋಗಾಸನ
ಒಂದಿಷ್ಟು ಡಯೆಟ್ ಫಾಲೋ ಜೊತೆಗೆ ತಮ್ಮ ಡಯೆಟ್ ನಲ್ಲಿ ಧಾನ್ಯಗಳನ್ನು ಸೇರಿಸಿಕೊಂಡರು
ರಾತ್ರಿ ಹೊತ್ತು ಬೇಯಿಸಿದ ಆಹಾರ ತ್ಯಜಿಸಿ ಹಣ್ಣು ಹಂಪಲು, ತರ್ಕಾರಿ ಮೊರೆ ಹೋದರು.
ಇದರೊಂದಿಗೆ ಡಯೆಟ್ ನಲ್ಲಿ ಯಾವುದನ್ನೂ ಮಾಡಬಾರದು ಅನ್ನುತ್ತಾರೋ ಅದನ್ನು ಶಿಸ್ತಾಗಿ ಫಾಲೋ ಮಾಡಿದರು, ಅನ್ನ, ಚಪಾತಿ, ಸಿಹಿ ಕರಿದ ಪದಾರ್ಥ ಮತ್ತು ಮಾಂಸಹಾರಕ್ಕೆ ಬ್ರೇಕ್ ಹಾಕಿದರು.
ಶಿಸ್ತಿನ ಇಲಾಖೆಯಲ್ಲಿ ಇದ್ದವರು ಶಿಸ್ತಾಗಿ ದೇಹ ದಂಡಿಸಿ ಇದೀಗ ಸೈ ಅನ್ನಿಸಿಕೊಂಡಿದ್ದಾರೆ.
.
Discussion about this post