2028ಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯದ ಮೊದಲ ಮಹಿಳಾ ಸಿಎಂ ಆಗ್ತಾರೆ ಎಂದು ಕೂಡಲಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಹೆಬ್ಬಾಳ್ಕರ್ 2018ರಲ್ಲಿ ಶಾಸಕರಾಗಿದ್ದಾರೆ, ಇದು ಕ್ವಾಟರ್ ಫೈನಲ್.2023 ಮತ್ತು 2028ರಲ್ಲೂ ಬೆಳಗಾವಿ ಗ್ರಾಮೀಣ ಜನತೆ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಬೇಕು.ಆಗ ಅದು ನಿಜವಾದ ಸೆಮಿ ಫೈನಲ್.
2028ಕ್ಕೆ ಗೆಲ್ಲಿಸಿ ತಂದ್ರೆ ಮಹಿಳಾ ಮುಖ್ಯಮಂತ್ರಿ ಆಗುವ ಶಕ್ತಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗಿದೆ.ಲಕ್ಷ್ಮೀ ಹೆಬ್ಬಾಳ್ಕರ್ ಇಡೀ ಕರ್ನಾಟಕದ ಕಿತ್ತೂರು ರಾಣಿಯಾಗಿ ಆಗ ಆಡಳಿತ ನಡೆಸುತ್ತಾರೆ ಶ್ರೀಗಳು ಹಾರೈಸಿದರು.
Discussion about this post