ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೇ 19 ರಂದು ನಡೆಯಲಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಲೋಕಸಮರದಲ್ಲಿ ಮಲ್ಲಿಕಾರ್ಜುನ ವಿರುದ್ಧ ಕಣಕ್ಕಿಳಿದಿರುವ ಉಮೇಶ್ ಜಾಧವ್ ಬಿಜೆಪಿಯಿಂದ ಪುತ್ರನಿಗೆ ಟಿಕೆಟ್ ಕೇಳಿದ್ದಾರಂತೆ.
ಈ ಹಿಂದೆ ಸ್ವತಃ ಡಾ. ಉಮೇಶ್ ಜಾಧವ್ ಕ್ಷೇತ್ರಕ್ಕೆ ಸಹೋದರ ರಾಮಚಂದ್ರ ಜಾಧವ್ ಹೆಸರನ್ನು ಶಿಫಾರಸು ಮಾಡಿದ್ರು. ಆದ್ರೀಗ ಕುಟುಂಬದಲ್ಲಿ ಹೊಂದಾಣಿಕೆ ಕಂಡು ಬಾರದ ಹಿನ್ನಲೆಯಲ್ಲಿ ಪುತ್ರನಿಗೆ ಟಿಕೆಟ್ ನೀಡುವಂತೆ ಯಡಿಯೂರಪ್ಪರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ಬಿಜೆಪಿ ರಾಜ್ಯಾಧಕ್ಷ ಬಿ.ಎಸ್ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ ಡಾ.ಉಮೇಶ್ ಜಾದವ್, ಪುತ್ರ ಅವಿನಾಶ್ ಜಾಧವ್ಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ ಅಂದಿವೆ ಮೂಲಕಗಳು
ಪುತ್ರನನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನಗಿರಲಿ ಎಂದು ಜಾಧವ್ ಹೇಳಿದ್ರೂ ಇದಕ್ಕೆ ಯಡಿಯೂರಪ್ಪ ಒಪ್ಪಿಲ್ಲವಂತೆ. ಈಗಾಗಲೇ ಸಹೋದರನ ಹೆಸರು ಸಾರ್ವಜನಿಕ ವಲಯದಲ್ಲಿ ಓಡಾಡುತ್ತಿದೆ. ಮತ್ತೆ ಪುತ್ರನಿಗೆ ಟಿಕೆಟ್ ಕೊಟ್ರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಚಿಂಚೋಳಿ ಕ್ಷೇತ್ರಕ್ಕೆ ಡಾ. ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಹೆಸರನ್ನೇ ಅಂತಿಮಗೊಳಿಸಿ ಹೈಕಮಾಂಡ್ ಕಳುಹಿಸಲಾಗಿದೆಯಂತೆ.
ಚಿಂಚೋಳಿ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಉಮೇಶ್ ಜಾಧವ್ ಅವರು 19 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದರು. ಬಿಜೆಪಿಯ ಸುನೀಲ್ ವಲ್ಯಾಪುರೆ ಅವರು 54,693 ಮತ ಪಡೆದು ಎರಡನೇ ಸ್ಥಾನ ಪಡೆದಿದ್ದರು.
ಇನ್ನು ಕುಂದಗೋಳ ಕ್ಷೇತ್ರಕ್ಕೆ ಎಸ್.ಎ. ಚಿಕ್ಕನಗೌಡ್ರ ಹೆಸರನ್ನು ಅಂತಿಮಗೊಳಿಸಿ ಬಿಜೆಪಿ ಹೈಕಮಾಂಡ್ಗೆ ರವಾನಿಸಲಾಗಿದೆ. ಕುಂದಗೋಳ ಶಾಸಕ, ಸಚಿವ ಸಿ.ಎಸ್. ಶಿವಳ್ಳಿ ಹಠಾತ್ ನಿಧನದಿಂದ ಇಲ್ಲಿ ಮರು ಚುನಾವಣೆ ನಡೆಯುತ್ತಿದೆ.
Discussion about this post