ಸಿಹಿ ತಿಂದು ಮೋದಿಯವರ ಹಲ್ಲು ಮುರಿದು ಹೋಗಲಿ
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನಡೆಸಿದಸಂದರ್ಶನದಲ್ಲಿ ಪ್ರಧಾನಿ ಮೋದಿ, ಪ್ರತಿಪಕ್ಷಗಳಲ್ಲೂ ನನಗೆ ಸ್ನೇಹಿತರಿದ್ದಾರೆ ಅಂದಿದ್ದರು.
ಅದರಲ್ಲೂ ವಿಶೇಷ ಮಮತಾ ಬ್ಯಾನರ್ಜಿ ಹೆಸರು ಉಲ್ಲೇಖಿಸಿದ್ದ ಅವರು, ದೀದಿ ಖುದ್ದಾಗಿ ವರ್ಷಕ್ಕೆ ಎರಡು ಜೊತೆ ಕುರ್ತಾ ಮತ್ತು ಸ್ವತಃ ತಯಾರಿಸಿದ ಸಿಹಿ ತಿಂಡಿಗಳನ್ನು ಕಳುಹಿಸುತ್ತಾರೆ ಎಂದಿದ್ದರು.
ಕುರ್ತಾ ಮತ್ತು ಸಿಹಿ ಕಳುಹಿಸುತ್ತಾರೆ ಎಂದು ಮೋದಿ ಬಹಿರಂಗಪಡಿಸಿದ್ದು, ಮಮತಾ ಬ್ಯಾನರ್ಜಿ ಪಿತ್ತ ನೆತ್ತಿಗೇರಿಸಿದೆ. ತಮ್ಮ ಸೌಜನ್ಯವನ್ನು ಮೋದಿ ರಾಜಕೀಯ ವಿಷಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.
‘ಕುರ್ತಾಗಳು ಮತ್ತು ಸ್ವೀಟ್ಗಳನ್ನು ಕಳುಹಿಸುವುದರಲ್ಲಿ ಯಾವ ತಪ್ಪೂ ಇಲ್ಲ. ದುರ್ಗಾ ಪೂಜೆ ಸಂದರ್ಭದಲ್ಲಿ ನಾವು ಪ್ರಮುಖ ವ್ಯಕ್ತಿಗಳ ಜತೆಗೆ ಸಿಹಿ ಹಂಚಿಕೊಳ್ಳುತ್ತೇವೆ. ಈ ವಿಷಯವನ್ನು ಬಹಿರಂಗಪಡಿಸುವ ಮೂಲಕ ಅವರು ರಾಜಕೀಯ ಮಾಡಲು ಹೊರಟಿದ್ದಾರೆ ಎಂದಿದ್ದಾರೆ
ಇನ್ನು ಮುಂಗೆ ಮಣ್ಣಿನಿಂದ ಸಿಹಿತಿಂಡಿ ತಯಾರಿಸಿ ಅದರೊಳಗೆ ಕಲ್ಲುಗಳನ್ನು ತುಂಬಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಚಿತ್ರ ಹೇಳಿಕೆ ಕೊಟ್ಟಿದ್ದಾರೆ.
ಲಡ್ಡು ತಯಾರಿಸುವಾಗ ಗೋಡಂಬಿ ಮತ್ತು ಒಣ ದ್ರಾಕ್ಷೆಗಳನ್ನು ಹಾಕುವಂತೆ ಮಣ್ಣಿನಿಂದ ತಯಾರಿಸಿದ ಸಿಹಿ ತಿಂಡಿಗೆ ಕಲ್ಲು ತುಂಬಿಸಿ ಮೋದಿಗೆ ಕಳುಹಿಸುತ್ತೇನೆ. ಅದನ್ನು ಅವರು ತಿನ್ನುವಾಗ ಹಲ್ಲುಗಳು ಮುರಿದು ಹೋಗಲಿ ಎಂದು ಬೇರೆ ಹೇಳಿದ್ದಾರೆ.
Discussion about this post