ಸುಧಾರಿತ ಸೇತುವೆ ತಂತ್ರಜ್ಞಾನ ಅಂತರಾಷ್ಟ್ರೀಯ ಸಮಾವೇಶ
ವೇದಿಕೆಯಲ್ಲಿ ಮತ್ತೆ ಕುಸಿದ ಸಚಿವ ನಿತಿನ್ ಗಡ್ಕರಿರಸ್ತೆ ನಿರ್ಮಾಣದಲ್ಲಿ ಯೋಜನಾ ವೆಚ್ಚವನ್ನು ವೇಗಗೊಳಿಸಲು ಮತ್ತು ಕಡಿತಗೊಳಿಸಲು ನಾವೀನ್ಯತೆಯೊಂದಿಗೆ ಪರ್ಯಾಯ ವಸ್ತುಗಳ ಬಳಕೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನಲ್ಲಿ ಇಂಡಿಯನ್ ರೋಡ್ಸ್ ಕಾಂಗ್ರೆಸ್, ಪಿಐಆರ್ಸಿ ಮತ್ತು ಕರ್ನಾಟಕ ಸರ್ಕಾರದ ಪಿಡಬ್ಲ್ಯೂಡಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಸುಧಾರಿತ ಸೇತುವೆ ತಂತ್ರಜ್ಞಾನ ಅಂತರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.
ಉತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ನಿರ್ಮಿಸಲು ಸುಧಾರಿತ ಜ್ಞಾನದ ಸರಿಯಾದ ಬಳಕೆ, ಪ್ರತ್ಯೇಕಿಸಿದ ತ್ಯಾಜ್ಯ ಮತ್ತು ಪರ್ಯಾಯ ವಸ್ತುಗಳನ್ನು ಬಳಸುವ ಕುರಿತಂತೆಯೂ ಪ್ರಸ್ತಾಪಿಸಿದರು. ರಸ್ತೆ ನಿರ್ಮಾಣದಲ್ಲಿ ತ್ಯಾಜ್ಯ, ಬೂದಿ, ಪ್ಲಾಸ್ಟಿಕ್, ರಬ್ಬರ್, ಬಿದಿರು ಹಾಗೂ ಸೇತುವೆಗಳ ನಿರ್ಮಾಣದಲ್ಲಿ ಪೂರ್ವ ನಿರ್ಧರಿತ ರಚನೆಗಳನ್ನು ಬಳಸುವುದರಿಂದ ನಿರ್ಮಾಣ ವೆಚ್ಚಕಡಿಮೆ ಮಾಡಬಹುದು.
ಜೊತೆಗೆ ರಸ್ತೆ ನಿರ್ಮಾಣವನ್ನು ತ್ವರಿತಗೊಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಸರಕು ಸಾಗಾಣೆ ವೆಚ್ಚವು ಅಮೆರಿಕ ಮತ್ತು ಬ್ರಿಟನ್ ನಲ್ಲಿ ಶೇ. ೧೨ರಷ್ಟು ಮತ್ತು ಚೀನಾದಲ್ಲಿ ಶೇ ೮ರಷ್ಟಿದೆ.
ಭಾರತದಲ್ಲಿ ಶೇ ೧೬ ರಷ್ಟಿದ್ದು, ಭಾರತದಲ್ಲಿಯೂ ಸರಕು ಸಾಗಾಣೆ ವೆಚ್ಚವನ್ನು ಕಡಿಮೆ ಮಾಡಲು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.