ಇಂದಿರಾ ಕ್ಯಾಂಟಿನ್ ಸಿದ್ದರಾಮಯ್ಯ ಅವರ ಜನಪರವಾದ ಯೋಜನೆ
ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟಿನ್ ಗಳಲ್ಲಿ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ ಎಂದು ಪೌರಾಡಳಿತ ಹಾಗು ಹಜ್ ಖಾತೆ ಸಚಿವರಾದ ರಹೀಂ ಖಾನ್ ಹೇಳಿದ್ದಾರೆ.
ಚಿಕ್ಕಮಗಳೂರು ನಗರದ ಇಂದಿರಾ ಕ್ಯಾಂಟಿನ್ ಗೆ ಇಂದು ಭೇತಿ ನೀಡಿ ಪರಿಶಿಲನೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇಂದಿರಾ ಕ್ಯಾಂಟಿನ್ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರವಾದ ಯೋಜನೆಯಾಗಿದೆ. ಜನರಿಗೆ ಅತ್ಯಂತ ಕಡಿಮೆ ಧರದಲ್ಲಿ ಆಹಾರ ನೀಡುವುದು ಇದರ ಉದ್ದೇಶ
ಅದೇ ರೀತಿ ಗುಣಮಟ್ಟದ ಅಹಾರ , ಶುದ್ದ ನೀರು, ಹಾಗು ಶುಚಿತ್ವಕ್ಕೆ ಆಧ್ಯತೆ ನೀಡಲಾಗಿದ್ದು ಹಲವೆಡೆ ಕ್ಯಾಂಟಿನ್ ಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಗಳನ್ನು ಪರಿಶಿಲಿಸಲಾಗುತ್ತಿದೆ ಎಂದು ತಿಳಿಸಿದ್ದರು.