ಅಳಿವಿನಂಚಿನ ‘ಸಿಂಗಳೀಕ’ ಮರಿ ಜನನ
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಿಂಗಳೀಕಗಳ ಸಂತಾನೋತ್ಪತ್ತಿ ಯಶಸ್ವಿಯಾಗಿದೆ. ಮೈಸೂರಿನ ಕೂರ್ಗಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಅಳಿವಿನಂಚಿನ ಸಿಂಗಳೀಕ ಮರಿ ಜನಿಸಿದೆ.
ಎರಡು ತಿಂಗಳ ಹಿಂದೆ ಮರಿ ಹುಟ್ಟಿದ್ದು, ಇವುಗಳ ಸಂಖ್ಯೆ ಈಗ ನಾಲ್ಕಕ್ಕೇರಿದೆ. ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ತಳಿ ಅಭಿವೃದ್ಧಿ ಯೋಜನೆಯಡಿ ೨೦೧೫ ರಿಂದ ಸಿಂಗಳೀಕಗಳ ತಳಿ ಸಂರಕ್ಷಣೆ, ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆದಿತ್ತು.
ಸಿಂಗಳೀಕ ಮರಿ ಜನನವಾಗಿರುವುದರಿಂದ, ಅಳವಿಂಚಿನಲ್ಲಿರುವ ಪ್ರಾಣಿಗಳ ತಳಿ ಸಂರಕ್ಷಣೆಗೆ ಶಕ್ತಿ ನೀಡಿದಂತಾಗಿದೆ. ಜೀವವೈವಿಧ್ಯದ ಸಮತೋಲನ ಕಾಯ್ದುಕೊಳ್ಳಲು ಅಳಿವಿನಂಚಿನ ಪ್ರಾಣಿಗಳ ಸಂರಕ್ಷಣೆಗಾಗಿ ಮೃಗಾಲಯಗಳಲ್ಲಿ ತಳಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ಕಾಡಿಗೆ ಬಿಡುವ ಯೋಜನೆ ಇದಾಗಿದ್ದು, ಕೇಂದ್ರಿಯ ಮೃಗಾಲಯ ಪ್ರಾಧಿಕಾರ ಯಾವ ತಳಿ ಅಭಿವೃದ್ಧಿ ಪಡಿಸಬೇಕೆಂದು ಮೃಗಾಲಯಗಳಿಗೆ ನಿರ್ದೇಶನ ನೀಡುತ್ತದೆ.
ಸಿಂಗಳೀಕವಲ್ಲದೇ ತೋಳ, ಕಾಡೆಮ್ಮೆ, ಸೀಳುನಾಯಿಗಳ ತಳಿಗಳ ಅಭಿವೃದ್ಧಿ ಕಾರ್ಯವೂ ಕಳೆದ ೯ ವರ್ಷದಿಂದ ನಡೆಯುತ್ತಿದೆ. ನೀಲಗಿರಿ ಲಂಗೂರ್, ಮಲಬಾರ್ ಅಳಿಲು, ಬೂದು ಕಾಡುಕೋಳಿ ಪ್ರಭೇದಗಳು ಯೋಜನೆಯ ವ್ಯಾಪ್ತಿಯಲ್ಲಿವೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್ ಕುಮಾರ್ ತಿಳಿಸಿದ್ದಾರೆ.
A lion-tailed macaque (LTM), an endangered species, has given birth to a young macaque at the Chamundi Rescue and Rehabilitation Centre for the Wild Animals, at Koorgalli on the outskirts of Mysuru. The rescue centre is run by the century-old Mysuru Zoo.