ಲಕ್ಕುಂಡಿಯ ಯುವಕರು ಶಿಲ್ಪಕಲೆಗಳ ರಕ್ಷಣೆಗೆ ಮುಂದಾಗಬೇಕು
ಶಿಲ್ಪ ಕಲೆಗೆ ಹೆಸರುವಾಸಿಯಾಗಿರುವ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಸಂಪೂರ್ಣ ಅಭಿವೃಧ್ಧಿಗೆ ರಾಜ್ಯ ಸರ್ಕಾರ ಬಧ್ಧವಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಿಂದ ೫ ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಚಾಲುಕ್ಯ ಕಾಲದಲ್ಲಿ ಅದ್ಬುತ ಶಿಲ್ಪಕಲೆಗಳು ಲಕ್ಕುಂಡಿ ಗ್ರಾಮದಲ್ಲಿವೆ. ಗ್ರಾಮದಲ್ಲಿ ಕಟ್ಟೆಯನ್ನು ಅಗೆದರೆ ಪಾರಂಪರಿಕ ಶಿಲ್ಪಕಲೆಗಳು ದೊರೆಯುತ್ತವೆ.
ಗ್ರಾಮಸ್ಥರು, ಯುವಕರು ಶಿಲ್ಪಕಲೆಗಳ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.