ಹುಬ್ಬಳ್ಳಿಯ ಮಮದಾಪುರ ಬಳಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ನಿರ್ಧಾರ
ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ೨೧೮ಕ್ಕೆ ಸಂಪರ್ಕ ಕಲ್ಪಿಸುವ ಮಹತ್ವದ ಮಮದಾಪುರ-ದೂಡಿಹಾಳ ೧೧ ಕಿಮೀ ಉದ್ದದ ಕೂಡು ರಸ್ತೆ ಕಾಮಗಾರಿಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದು ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ೩ ಸಾವಿರದ ೬೦೦ ಕೋಟಿ ಸಹಿತ ಸುಮಾರು ೧೦ ಸಾವಿರ ಕೋಟಿಗಳಲ್ಲಿ ರಸ್ತೆ, ಕೆರೆತುಂಬುವ ಯೋಜನೆಗಳು, ಕಾಲುವೆಗಳ ನಿರ್ಮಾಣ ಸೇರಿದಂತೆ ಮಹತ್ವದ ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಹೇಳಿದರು.
ಮಮದಾಪುರ ಸಮೀಪ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಹೆಸರಿನಲ್ಲಿ ೧,೬೦೦ ಎಕರೆಗಳಲ್ಲಿ ಮಾದರಿ ಅರಣ್ಯ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.