ಯುದ್ಧದ ಹಿನ್ನಲೆಯಲ್ಲಿ 10 ಗಂಟೆ Rail force one ರೈಲಿನಲ್ಲೇ ಯಾನ
ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ದ ನಡೆಯುತ್ತಿರುವ ಕಾರಣ ಭದ್ರತೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪೋಲೆಂಡ್ ನಿಂದ ಉಕ್ರೇನ್ ಗೆ ರೈಲಿನಲ್ಲಿ Rail force one ಪ್ರಯಾಣ ಬೆಳೆಸಲಿದ್ದಾರೆ. ಸುಮಾರು 10 ಗಂಟೆಗಳ ಕಾಲ ಅವರು ರೈಲಿನಲ್ಲೇ ಪ್ರಯಾಣ ಮಾಡಲಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಕಾರಣದಿಂದ ಪರಸ್ಪರ ವೈಮಾನಿಕ ದಾಳಿ ನಿತ್ಯ ನಡೆಯುತ್ತಿದೆ. ಹೀಗಾಗಿಯೇ ಪೋಲೆಂಡ್ ನಿಂದ ಉಕ್ರೇನ್ ರಾಜಧಾನಿ ಕೀವ್ ಗೆ ಪ್ರಧಾನಿ ನರೇಂದ್ರ ಮೋದಿಯವರು ಗಣ್ಯರ ಸಂಟಾರಕ್ಕೆ ಮೀಸಲಿರುವ ಟ್ರೇನ್ ಫೋರ್ಸ್ ಒನ್ ರೈಲಿನಲ್ಲಿ ಸಂಚಾರ ಮಾಡಲಿದ್ದಾರೆ. ಒಂದು ಕಡೆಯ ಸಂಚಾರಕ್ಕೆ 10 ಗಂಟೆಗಳು ಬೇಕಾಗಿದ್ದು, ಹೀಗಾಗಿ 20 ಗಂಟೆಗಳ ಕಾಲ ಮೋದಿ ರೈಲಿನಲ್ಲಿ ಪ್ರಯಾಣ ಮಾಡಲಿದ್ದಾರೆ.
ಏನಿದು ರೈಲ್ ಫೋರ್ಸ್ ಒನ್
ಮೊದಲು ಈ ರೈಲನ್ನು ಕ್ರೆಮಿಯಾಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಸಿದ್ದಪಡಿಸಲಾಗಿತ್ತು. ಯಾವಾಗ ರಷ್ಯಾ ಕ್ರೆಮಿಯಾ ಆಕ್ರಮಿಸಿಕೊಂಡಿತೋ, ಬಳಿಕ ಈ ಟ್ರೇನ್ ಫೋರ್ಸ್ ಒನ್ ರೈಲನ್ನು ಉಕ್ರೇನ್ ಗೆ ಆಗಮಿಸುವ ಗಣ್ಯರ ಸಂಚಾರಕ್ಕೆ ಮೀಸಲಿರಿಸಲಾಯ್ತು. ಈ ರೈಲು ಐಷಾರಾಮಿ ವ್ಯವಸ್ಥೆಯೊಂದಿಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಹೊಂದಿದೆ.
ರಈ ಹಿಂದೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್, ಜರ್ಮನ್ ಚಾನ್ಸಲರ್ ಒಲಾಫ್ ಸೇರಿ ಅನೇಕ ವಿದೇಶಿ ಗಣ್ಯರು ಈ ರೈಲಿನಲ್ಲೇ ಪ್ರಯಾಣ ಮಾಡಿದ್ದಾರೆ.
ಇಂದಿನಿಂದ ( ಆಗಸ್ಟ್ 21 ) ಪ್ರಧಾನಿ ನರೇಂದ್ರ ಮೋದಿಯವರು ಪೋಲೆಂಡ್ ಮತ್ತು ಉಕ್ರೇನ್ ಪ್ರವಾಸ ಕೈಗೊಳ್ಳಲಿದ್ದಾರೆ. ಆಗಸ್ಟ್ 21 ರಂದು ಪೋಲೆಂಡ್ ಗೆ ಭೇಟಿ ನೀಡೋ ನರೇಂದ್ರ ಮೋದಿ ಆಗಸ್ಟ್ 23ಕ್ಕೆ ಉಕ್ರೇನ್ ಗೆ ಭೇಟಿ ನೀಡಲಿದ್ದಾರೆ.
40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್ ಗೆ ಭೇಟಿ ನೀಡುತ್ತಿದ್ದು, ಈ ಹಿಂದೆ 1979ರಲ್ಲಿ ಮೋರಾರ್ಜಿ ದೇಸಾಯಿಯವರು ಪೋಲೆಂಡ್ ಗೆ ಭೇಟಿ ನೀಡಿದ್ದರು.
1991ರ ನಂತರ ಉಕ್ರೇನ್ ಸ್ವತಂತ್ರ ದೇಶವಾದ ಬಳಿಕ ಅಲ್ಲಿಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಅನ್ನೋ ಹಿರಿಮೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರವಾಗಲಿದ್ದಾರೆ.